ಪಾತ್ರ ಹಾಗೂ ಸಿನಿಮಾ ವಿಷಯದಲ್ಲಿ ವಿಶೇಷತೆ ಮೆರೆವ ಕಮಲ್ ಹಾಸನ್ ಅವರ ‘ಇಂಡಿಯನ್ 2’ ಚಿತ್ರ ನಿರ್ಮಾಣವಾಗುವುದು ಬಹುತೇಕ ಅಂತಿಮವಾಗಿದೆ. ಎರಡು ದಶಕಗಳ ನಂತರ ಕಮಲ್ ಹಾಗೂ ನಿರ್ದೇಶಕ ಶಂಕರ್ ಈ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ಕಮಲ್ ಹಾಸನ್ ಅವರದ್ದು ಸ್ವಾತಂತ್ರ್ಯ ಹೋರಾಟಗಾರನ ಪಾತ್ರ.
ಚಿತ್ರದ ನಿರ್ದೇಶನ ಹಾಗೂ ಕಥೆಯ ಹೂರಣ ಕುತೂಹಲ ಹುಟ್ಟಿಸಿದಷ್ಟೇ ಚಿತ್ರಕ್ಕೆ ನಯನತಾರಾ ನಟಿಯಾಗುತ್ತಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಈ ವರ್ಷಾರ್ಧದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಕಮಲ್ ಹಾಸನ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತೂಕ ಕಳೆದುಕೊಳ್ಳಲಿದ್ದಾರೆ. ಈ ಫಿಟ್‌ನೆಸ್ ನಿರ್ವಹಣೆಗೆ ಅಮೆರಿಕದ ತಜ್ಞರೊಬ್ಬರು ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಯುವ ಮನಸುಗಳ ಅಚ್ಚುಮೆಚ್ಚಿನ ಅನಿರುದ್ಧ ರವಿಚಂದ್ರನ್ ಕೂಡ ಅಭಿನಯಿಸಲಿದ್ದು ಚಿತ್ರ ಒಟ್ಟಿಗೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣಗೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.