ಔಪಚಾರಿಕ ಬೇಡ; ಕೃಷ್ಣೆಯ ಕುಡಿಗಳ ಕೂಗಿದು..!

7
189 ಟಿಎಂಸಿ ಅಡಿಗೂ ಹೆಚ್ಚು ನೀರು ಹೊರ ಹರಿದ ನಂತರ ಕೃಷ್ಣೆಗೆ ‘ಸರ್ಕಾರಿ ಬಾಗಿನ’ ಅರ್ಪಣೆ ಇಂದು

ಔಪಚಾರಿಕ ಬೇಡ; ಕೃಷ್ಣೆಯ ಕುಡಿಗಳ ಕೂಗಿದು..!

Published:
Updated:
Deccan Herald

ವಿಜಯಪುರ:  ಆಲಮಟ್ಟಿಯ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದಲ್ಲಿ ‘ಕೃಷ್ಣೆ’ ಮೈದುಂಬಿ ಬರೋಬ್ಬರಿ ತಿಂಗಳ ಆಸುಪಾಸು. ಈ ಅವಧಿಯಲ್ಲಿ ಜಲಾಶಯದಿಂದ ಕನಿಷ್ಠ 189 ಟಿಎಂಸಿ ಅಡಿ ನೀರು ಹೊರ ಹರಿದಿದೆ. ನಿಸರ್ಗದ ದೇಣಿಗೆಗೆ ಕೃತಜ್ಞತೆ ಅರ್ಪಿಸಲು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಬಾಗಿನ ಅರ್ಪಿಸಲಿದ್ದಾರೆ.

‘ರಾಜ್ಯ ಸರ್ಕಾರದ ವತಿಯಿಂದ ಕೃಷ್ಣೆಗೆ ‘ಬಾಗಿನ’ ಅರ್ಪಿಸಿ, ಗೌರವ ಸಲ್ಲಿಸುವ ಸಂಪ್ರದಾಯ ಆರಂಭಗೊಂಡ ವರ್ಷದಿಂದಲೂ ಆಯಾ ಅವಧಿಯಲ್ಲಿನ ಮುಖ್ಯಮಂತ್ರಿಗಳು, ಈ ಭಾಗದ ಜನರ ಒತ್ತಡಕ್ಕೋ ? ಸರ್ಕಾರಿ ಕಾರ್ಯಕ್ರಮ ಎಂಬ ಔಪಚಾರಿಕತೆಯಿಂದ ಇದರಲ್ಲಿ ಭಾಗಿಯಾಗುತ್ತಿದ್ದಾರೆ.

ಪ್ರಸಕ್ತ ಬಾರಿಯಾದರೂ ಈ ಸಂಪ್ರದಾಯಕ್ಕೆ ಇತಿಶ್ರೀ ಬೀಳಲಿದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಎಚ್‌ಡಿಕೆ ಸಹ ಈ ಹಿಂದಿನ ಪದ್ಧತಿಗೆ ಮನ್ನಣೆ ನೀಡಿ, ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಒಂದು ತಾಸಿನ ಅವಧಿ ಆಲಮಟ್ಟಿಗೆ ಭೇಟಿ ನೀಡಿ, ಬಾಗಿನ ಅರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಬೇಸರ ವ್ಯಕ್ತಪಡಿಸಿದರು.

‘ಬಾಗಿನ ಅರ್ಪಣೆಗಾಗಿ ಬರುವ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ, ಅವಳಿ ಜಿಲ್ಲೆ ಪ್ರತಿನಿಧಿಸುವ ಸಚಿವರು, ಆಲಮಟ್ಟಿ, ನಾರಾಯಣಪುರ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ರೈತ ಮುಖಂಡರ ಜತೆ ಈ ವ್ಯಾಪ್ತಿಯ ನೀರಾವರಿ ಕಾಮಗಾರಿ ಕುರಿತಂತೆ ಚರ್ಚಿಸಬೇಕು.

ಅಧಿಕಾರಿಗಳ ಜತೆ ಸಭೆ ನಡೆಸಿ, ಹಿಂದಿನ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳು, ಅದರಿಂದ ರೈತರಿಗಾದ ಅನುಕೂಲಗಳು, ವಿಸ್ತರಿಸಬೇಕಾದ ನೀರಾವರಿ ಯೋಜನೆ, ಹೊಸ ಯೋಜನೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸಬೇಕು. ಎಲ್ಲದಕ್ಕೂ ಕಾಲಮಿತಿ ನಿಗದಿಪಡಿಸಬೇಕು.

ಇದು ಅನುಷ್ಠಾನಗೊಂಡರೇ ಮಾತ್ರ ಆಲಮಟ್ಟಿ ಯೋಜನೆ ಪೂರ್ಣಗೊಳ್ಳುತ್ತದೆ. 524.256 ಮೀ ಎತ್ತರದವರೆಗೂ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಇನ್ನೂ 100 ಟಿಎಂಸಿ ಅಡಿಗೂ ಹೆಚ್ಚಿನ ನೀರು ಲಭ್ಯವಾಗಲಿದೆ. ಈ ಭಾಗದ ಜನರ ಬದುಕು ಹಸನಾಗಲಿದೆ.

ಇಲ್ಲದಿದ್ದರೇ ಈಗಾಗಲೇ ಐದೂವರೆ ದಶಕ ಗತಿಸಿದೆ. ರೈತರ ಹೊಲಗಳಿಗೆ ನೀರು ಹರಿಯಲು ಇನ್ನೂ ಎಷ್ಟು ಅವಧಿ ಬೇಕಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವಾಗಲಿದೆ. ಯೋಜನೆ ಪೂರ್ಣಗೊಳ್ಳದು’ ಎನ್ನುತ್ತಾರೆ ಕಾಡಾ ಮಾಜಿ ಅಧ್ಯಕ್ಷರೂ ಆಗಿರುವ ಬಸವರಾಜ ಕುಂಬಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !