'ಬಯಲು ಮಲವಿಸರ್ಜನೆ ಆರೋಗ್ಯಕ್ಕೆ ಹಾನಿಕರ' ಜಾಗೃತಿ ನಾಟಕ

7

'ಬಯಲು ಮಲವಿಸರ್ಜನೆ ಆರೋಗ್ಯಕ್ಕೆ ಹಾನಿಕರ' ಜಾಗೃತಿ ನಾಟಕ

Published:
Updated:
ಚನ್ನಪಟ್ಟಣ ತಾಲ್ಲೂಕಿನ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ 'ಬಯಲು ಮಲವಿಸರ್ಜನೆ ಆರೋಗ್ಯಕ್ಕೆ ಹಾನಿಕರ' ಜಾಗೃತಿ ಬೀದಿ ನಾಟಕ ಪ್ರದರ್ಶನ ನಡೆಯಿತು

ಚನ್ನಪಟ್ಟಣ: ಅರಿವಿನ ಕೊರತೆಯಿಂದ ಬಯಲು ಮಲವಿಸರ್ಜನೆ ಮರುಕಳಿಸುತ್ತಿದ್ದು, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ವಿಷಾದಿಸಿದರು.

ತಾಲ್ಲೂಕಿನ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 'ಬಯಲು ಮಲವಿಸರ್ಜನೆ ಆರೋಗ್ಯಕ್ಕೆ ಹಾನಿಕರ' ಜಾಗೃತಿ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ಇಂದಿಗೂ ಬಯಲು ಮಲವಿಸರ್ಜನೆಯನ್ನು ನೆಚ್ಚಿಕೊಂಡಿರುವುದು ವಿಷಾದನೀಯ. ಇದರಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಪ್ರತಿವರ್ಷ ರಕ್ತಹೀನತೆ, ಜಂತುಹುಳು, ಕೊಕ್ಕೆಹುಳು ಹಾಗೂ ವಿಷಜಂತುಗಳ ಕಡಿತದಿಂದ ಸಾವಿರಾರು ಮಂದಿ ಮರಣ ಹೊಂದುತ್ತಿದ್ದಾರೆ. ಮುಂದಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಮನೆಗಳಲ್ಲಿಯೇ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿ, ಜಿಲ್ಲಾಡಳಿತ ತರಾತುರಿಯಲ್ಲಿ ರಾಮನಗರವನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಿರುವುದು ಹಾಸ್ಯಾಸ್ಪದ. ವಾಸಿಸಲು ಸೂರಿಲ್ಲದ ಅದೆಷ್ಟೋ ಬಡ ಕುಟುಂಬಗಳು ಸ್ಥಳಾಭಾವದಿಂದ ಶೌಚಾಲಯವನ್ನೇ ಹೊಂದಿಲ್ಲ ಎಂದರು.

ಚನ್ನಪಟ್ಟಣದ ಮಹದೇಶ್ವರ ನಗರದಲ್ಲಿ ವಾಸವಿರುವ ಸುಮಾರು 300ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬಯಲು ಶೌಚವನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.

ಸಿ.ವಿ.ಕೌಶಿಕ್ ಗೌಡ, ಕೆ.ಪಿ.ವಿಶ್ವಾಸ್, ಹರೀಶ್ ಸೋನಿ, ರಾಘವೇಂದ್ರ, ನಾರಾಯಣಸ್ವಾಮಿ, ನಿಷ್ಕಲ, ಸುಧಾರಾಣಿ, ಶಶಿಕಲಾ, ಹುಚ್ಚಮ್ಮ, ಹುಲ್ಲೂರಯ್ಯ, ಜಯಮ್ಮ, ಸಿದ್ದಾರ್ಥ ಮೌರ್ಯ, ಕೃತಿ, ಪದ್ಮಾವತಿ, ಚಿಕ್ಕಲಿಂಗಮ್ಮ ಭಾಗವಹಿಸಿದ್ದರು. ಜಾಗೃತಿ ಗೀತೆಗಳನ್ನು ಹಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !