ಶಿವಮೊಗ್ಗ: ಮತದಾನ ಜಾಗೃತಿ; ಒಂದೇ ದಿನ 5 ಸಾವಿರ ಮನೆಗಳಿಗೆ ಭೇಟಿ

ಸೋಮವಾರ, ಏಪ್ರಿಲ್ 22, 2019
31 °C

ಶಿವಮೊಗ್ಗ: ಮತದಾನ ಜಾಗೃತಿ; ಒಂದೇ ದಿನ 5 ಸಾವಿರ ಮನೆಗಳಿಗೆ ಭೇಟಿ

Published:
Updated:
Prajavani

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ.ದಯಾನಂದ ನೇತೃತ್ವದ ತಂಡ ಒಂದೇ ದಿನ 5 ಸಾವಿರ ಮನೆಗಳಿಗೆ ಭೇಟಿ ನೀಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಜಿಲ್ಲೆಯ ಎಲ್ಲಾ ಅರ್ಹ ಮತದಾರರಲ್ಲೂ ಮತದಾನದ ಮಹತ್ವ ಅರ್ಥಮಾಡಿಸಲು ಅಧಿಕಾರಿಗಳು, ನೌಕರರು, ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕರನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡಗಳ ಸದಸ್ಯರು ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಮನೆಗೆ ಭೇಟಿ ನೀಡಿ ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದರು. ಮತದಾನದ ಮಹತ್ವ ಅರ್ಥ ಮಾಡಿಸಿದರು.

ಸ್ವತಃ ಜಿಲ್ಲಾಧಿಕಾರಿ ಈ ಅಭಿಯಾನದಲ್ಲಿ ಭಾಗವಹಿಸಿ, ನಡಿಗೆಯಲ್ಲೇ ಹಲವು ಕಿ.ಮೀ. ಕ್ರಮಿಸಿದರು. ತಿಲಕ್ ನಗರ, ದುರ್ಗಿಗುಡಿಯಲ್ಲಿ ಮನೆಮನೆಗೆ ತೆರಳಿ, ಕರಪತ್ರ ವಿತರಿಸಿದರು. ಮತದಾನ ಮಾಡುವಂತೆ ವಿನಂತಿಸಿದರು.

ಈ ಭೇಟಿಯಿಂದ ಜನರಲ್ಲಿ ಮತದಾನದ ಅರಿವು ಮೂಡುವುದರ ಜೊತೆಗೆ ಜನರಲ್ಲಿ ಚರ್ಚೆಗೆ ಅನುವು ಮಾಡಿಕೊಡಲಿದೆ. ಚುನಾವಣೆ ಕುರಿತು ಜನರ ಗಮನ ಸೆಳೆಯುವ ಹಾಗೂ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಜಾಗೃತಿಗೊಳಿಸಲಾಗುತ್ತಿದೆ. ಮತದಾನದಲ್ಲಿ ಶೇ 100ರ ಗುರಿಸಾಧಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಅಂದಿನ ಗುಪ್ತ ಪತ್ರಿಕೆಗಳ ಮೂಲಕ, ಜನರ ಬಾಯಿಂದ ಬಾಯಿಗೆ ಹರಡುತ್ತಿದ್ದ ವಿಚಾರಗಳು ಗ್ರಾಮೀಣ ಪ್ರದೇಶದ ಜನರನ್ನು ತಲುಪುತ್ತಿದ್ದವು. ಈಗ ಇಂತಹ ಮಾರ್ಗದ ಮೂಲಕ ಈ ಕಾರ್ಯಕ್ರಮ ಯಶಸ್ವಿಗೆ ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಸಮರ್ಥ ಜನಪ್ರತಿ ಆಯ್ಕೆ ಮಾಡಿಕೊಳ್ಳಲು ಹಾಗೂ ಜನರಲ್ಲಿ ಸಾಮಾಜಿಕ ಬದಲಾವಣೆಯ ಅಭಿಪ್ರಾಯ ಹುಟ್ಟುಹಾಕಲು ಇದು ವೇದಿಕೆಯಾಗುತ್ತಿದೆ. ಅತಿ ಹೆಚ್ಚು ಮತದಾನದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಮತದಾನ ಕಡಿಮೆಯಾದಲ್ಲಿ ಅದು ಅಭದ್ರಗೊಂಡು ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗಲಿವೆ. ಇದು ಅರಾಜಕತೆಗೂ ನಾಂದಿಯಾಗಬಹುದು. ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಬಲಿಯಾಗದೆ ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸಿಒಇ ಕೆ.ಶಿವರಾಮೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !