ಉಮೇದುವಾರಿಕೆ ಬಯಸಿದ ಅಭ್ಯರ್ಥಿಗಳು 14

ಶನಿವಾರ, ಏಪ್ರಿಲ್ 20, 2019
28 °C
ನಾಮಪತ್ರ ಸಲ್ಲಿಕೆ ಅಂತ್ಯ, ಇಂದು ಪರಿಶೀಲನೆ, ವಾಪಸ್‌ ಪಡೆಯಲು ಮೂರು ದಿನ ಅವಕಾಶ

ಉಮೇದುವಾರಿಕೆ ಬಯಸಿದ ಅಭ್ಯರ್ಥಿಗಳು 14

Published:
Updated:

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆ ಬಯಸಿ ಇದುವರೆಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಪಕ್ಷೇತರ ಅಭ್ಯರ್ಥಿಗಳಾದ ಚನ್ನಗಿರಿಯ ಕೆ.ಶಿವಲಿಂಗಪ್ಪ ಹಾಗೂ ಶಿವಮೊಗ್ಗದ ಎಸ್.ಉಮೇಶ್ ವರ್ಮಾ ನಾಮಪತ್ರ ಸಲ್ಲಿಸಿದರು. ಮಾರ್ಚ್‌ 20ರಿಂದ ಇಲ್ಲಿಯವರೆಗೆ 14 ಅಭ್ಯರ್ಥಿಗಳು ಒಟ್ಟು 26 ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮೂರು ಸೆಟ್‌ಗಳಲ್ಲಿ, ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಸ್‌.ಮಧುಬಂಗಾರಪ್ಪ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ರಿಪಬ್ಲಿಕನ್ ಸೇನಾ ಪಕ್ಷದಿಂದ ಗುಡ್ಡಪ್ಪ, ಎನ್.ಟಿ.ವಿಜಯಕುಮಾರ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಕೆ.ಕೃಷ್ಣ, ಬಹುಜನ ಸಮಾಜ ಪಕ್ಷದಿಂದ ಗುಡ್ಡಪ್ಪ ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್‌.ವೆಂಕಟೇಶ್ ಮತ್ತು ವೈ.ಡಿ.ಸತೀಶ್, ಪಕ್ಷೇತರರಾಗಿ ಎಸ್‌.ಉಮೇಶಪ್ಪ, ಬಿ.ಕೆ.ಶಶಿಕುಮಾರ್, ಉಮೇಶ ಶರ್ಮಾ, ಮಹಮದ್ ಯೂಸೂಫ್ ಖಾನ್, ಕೆ.ಸಿ.ವಿನಯ್, ಕೆ.ಶಿವಲಿಂಗಪ್ಪ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಏ. 5ರಂದು ನಡೆಯಲಿದೆ. ನಾಮಪತ್ರ ಹಿಂದೆಗೆದುಕೊಳ್ಳಲು ಏ.8 ಕೊನೆಯ ದಿನ. ಅಂದು ಮಧ್ಯಾಹ್ನ 3ರ ನಂತರ ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗುತ್ತದೆ.

ವೀಕ್ಷಕರ ನೇಮಕ: ಜಿಲ್ಲೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಭಾರತ ಚುನಾವಣಾ ಆಯೋಗ ಸಾಮಾನ್ಯ ವೀಕ್ಷಕರು, ಲೆಕ್ಕಪತ್ರ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಿಸಿದೆ.

ಸಾಮಾನ್ಯ ವೀಕ್ಷಕರಾಗಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಿಗೆ ಶಾಹಿದ್ ಮಂಜರ್ ಅಬ್ಬಾಸ್ ರಿಜ್ವಿ,(94150 47611), ತೀರ್ಥಹಳ್ಳಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಪುಷ್ಪೇಂದ್ರ ಸಿಂಗ್ (95823 51955), ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ರಾಜೀವ್‌ಕುಮಾರ್ (83348 77100) ಅವರನ್ನು ನೇಮಿಸಲಾಗಿದೆ.

ಲೆಕ್ಕಪತ್ರ ವೀಕ್ಷಕರಾಗಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಿಗೆ ಕೆ.ಎಲ್.ಸೋಲಂಕಿ (94087 93558), ತೀರ್ಥಹಳ್ಳಿ, ಬೈಂದೂರು, ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ಸೋಫಿಯಾ ದಹಿಯಾ (98710 74775) ಅವರನ್ನು ನೇಮಿಸಲಾಗಿದೆ.

ಪೊಲೀಸ್ ವೀಕ್ಷಕರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ರಾಮ್‌ಸಿಂಗ್(81301 00080) ಅವರನ್ನು ನೇಮಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಎಲ್ಲಾ ವೀಕ್ಷಕರಿಗೆ ಸಹಾಯಕರಾಗಿ ಅಗತ್ಯವಿರುವ ಸಿಬ್ಬಂದಿ, ಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !