ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಅಭ್ಯರ್ಥಿಗಳ ಆಸ್ತಿ ವಿವರ

Last Updated 16 ಅಕ್ಟೋಬರ್ 2018, 14:35 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭೆ ಉಪಚುನಾವಣೆ ಅಭ್ಯರ್ಥಿಗಳ ಆಸ್ತಿ ವಿವರ.

ಮಧು ಬಂಗಾರಪ್ಪ ಆಸ್ತಿ ವಿವರ

ಜೆಡಿಎಸ್– ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ₹ 48 ಕೋಟಿ ಆಸ್ತಿ ಹೊಂದಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವರದಿಯಂತೆ ಅವರ ವಾರ್ಷಿಕ ಆದಾಯ ಕೃಷಿ ಮೂಲಗಳಿಂದ ₹ 65.17 ಲಕ್ಷ, ಪತ್ನಿ ಅನಿತಾ ಅವರ ಆದಾಯ ₹ 21 ಲಕ್ಷವಿದೆ. ಅವಲಂಬಿತ ಪುತ್ರನ ಹೆಸರಿಗೆ ₹ 4.30 ಕೋಟಿ ಮೌಲ್ಯದ ಆಸ್ತಿ ಇದೆ. ಪಿತ್ರಾರ್ಜಿತವಾಗಿ ₹ 12.52 ಕೋಟಿ ಮೌಲ್ಯದ ಆಸ್ತಿ ಬಂದಿದೆ. ₹ 10.72 ಕೋಟಿ ಸಾಲವಿದೆ.

ಮಧು ಬಂಗಾರಪ್ಪ ಅನಿತಾ (₹ ಗಳಲ್ಲಿ)

ಸ್ಥಿರಾಸ್ತಿ: 37.40 ಕೋಟಿ ಇಲ್ಲ

ಚರಾಸ್ತಿ: 10.35 ಕೋಟಿ 10.02 ಕೋಟಿ

ಚಿನ್ನಾಭರಣ: 1.25 ಕೋಟಿ, 82.73 ಲಕ್ಷ

ನಗದು: 81 ಲಕ್ಷ 10 ಲಕ್ಷ

ಮಹಿಮ ಪಟೇಲ್‌ ಆಸ್ತಿ ವಿವರ

ಜೆಡಿಯು ಅಭ್ಯರ್ಥಿ ಮಹಿಮ ಪಟೇಲ್ ₹ 7ಕೋಟಿ ಹಾಗೂ ಪತ್ನಿ ಶೈಲಜಾ ₹ 5 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿವರದಂತೆ ಅವರ ವಾರ್ಷಿಕ ಆದಾಯ ₹ 14 ಲಕ್ಷ, ಪತ್ನಿ ಆದಾಯ ₹ 17 ಲಕ್ಷ. ಪಿತ್ರಾರ್ಜಿತವಾಗಿ ಮಹಿಮ ಅವರಿಗೆ ₹ 84.57 ಲಕ್ಷ ಮೌಲ್ಯದ ಆಸ್ತಿ ಬಂದಿದೆ.

ಮಹಿಮ ಪಟೇಲ್ ಶೈಲಜಾ (₹ ಗಳಲ್ಲಿ)

ಚರಾಸ್ತಿ: 1.19 ಕೋಟಿ 87.78 ಲಕ್ಷ
ಸ್ಥರಾಸ್ತಿ: 5.77 ಕೋಟಿ 4.63 ಕೋಟಿ
ಸಾಲ: 61.97 ಲಕ್ಷ 60.93 ಲಕ್ಷ
ನಗದು: 2 ಲಕ್ಷ 29 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT