ಶಿವಮೊಗ್ಗ: ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ

7
ಲೋಕಸಭಾ ಉಪಚುನಾವಣೆ: 2002 ಮತಗಟ್ಟೆ ತಲುಪಿದ ಅಧಿಕಾರಿಗಳು ಮತ್ತು ಸಿಬ್ಬಂದಿ

ಶಿವಮೊಗ್ಗ: ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ

Published:
Updated:

ಶಿವಮೊಗ್ಗ: ಲೋಕಸಭಾ ಉಪಚುನಾವಣೆಗೆ ನ. 3ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಎಂಟು ವಿಧಾನಸಭಾ ಕ್ಷೇತ್ರ ವ್ಯಪ್ತಿಯ 2002 ಮತಗಟ್ಟೆಗಳಿಗೆ ಶುಕ್ರವಾರ ಸಂಜೆ ವೇಳೆಗೆ 11,150 ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿದರು.

ಒಟ್ಟು 2,505 ವಿದ್ಯನ್ಮಾನ ಮತಯಂತ್ರಗಳು ಹಾಗೂ ಅಷ್ಟೆ ಸಂಖ್ಯೆಯ ವಿವಿಪಾಟ್‌, 2,327 ನಿಯಂತ್ರಣ ಘಟಕಗಳನ್ನು ಮತದಾನಕ್ಕೆ ಸಜ್ಜುಗೊಳಿಸಲಾಗಿದೆ. ಮತಯಂತ್ರದ ಜತೆ ಸಿಬ್ಬಂದಿ ತೆರಳಲು 337 ಬಸ್‌ಗಳನ್ನು ನಿಯೋಜಿಸಲಾಗಿತ್ತು.

8,17,948 ಪುರುಷರು, 8,27,111 ಮಹಿಳೆಯರು ಸೇರಿ 16,45,059 ಮತದಾರರು ಈ ಬಾರಿ ಮತದಾನದ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

ಶಾಂತಿಯುತ, ಪಾರದರ್ಶಕ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಭಾಗಗಳಲ್ಲಿ16 ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ. ಸಾಗರ ತಾಲ್ಲೂಕಿನ ಬುಡಕಟ್ಟು ಮತದಾರರು ಇರುವ ಕಡೆ ನೀಲಿ ಮತಗಟ್ಟೆ ಸ್ಥಾಪಿಸಲಾಗಿದೆ.

ಮತಗಟ್ಟೆಗಳಿಗೆ 6,609 ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. 348 ವೀಕ್ಷಕರು ಮೇಲ್ವಿಚಾರಣೆ ನಡೆಸಲಿದ್ದಾರೆ.

ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಧೈರ್ಯವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಕುಟುಂಬನದ ಸದಸ್ಯರನ್ನೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಇಂದು ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕರು ಮತದಾನದ ದನ ಬೆಳಿಗ್ಗೆ 5.45ಕ್ಕೆ ಮತಗಟ್ಟೆಯಲ್ಲಿ ಹಾಜರಿರಬೇಕು. 6ಗಂಟೆಯಿಂದ ಮಾಕ್‌ ಪೋಲ್ ಆರಂಭಿಸಬೇಕು. ಕನಿಷ್ಠ 50 ಮತಗಳನ್ನು ಪ್ರಾಯೋಗಿಕವಾಗಿ ಹಾಕಿದ ನಂತರ ಮತಯಂತ್ರಗಳನ್ನು ಸಜ್ಜುಗೊಳಿಸಬೇಲು ಎಂದು ಸೂಚಿಸಲಾಗಿದೆ. ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಎರಡಗೈ ತೋರು ಬೆರಳಿಗೆ ಶಾಯಿ: ಈ ಬಾರಿ ಪ್ರತಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲು ಚುನಾವಣಾ ಆಯೋಗ ಸೂಚಿಸಿದೆ.

163 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಜಿಲ್ಲೆಯಲ್ಲಿ 163 ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ರಾಜಕಾರಣಿಗಳು, ಅವರ ಅನುಯಾಯಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

28 ಮತಗಟ್ಟೆಗಳಿಗೆ ಭಾರಿ ಭದ್ರತೆ: ಜಿಲ್ಲೆಯಲ್ಲಿ 28 ನಕ್ಸಲ್ ಪೀಡಿದ ಪ್ರದೇಶದ ಮತಗಟ್ಟೆಗಳಿವೆ. ಇಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !