ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಾಳು: ಪುಂಡ ಸಲಗ ಸೆರೆ

Last Updated 31 ಆಗಸ್ಟ್ 2018, 14:00 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಚನ್ನಪಟ್ಟಣ–ಕನಕಪುರ ತಾಲ್ಲೂಕುಗಳ ಕಾಡಂಚಿನ ಗ್ರಾಮಗಳಲ್ಲಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಸಲಗವೊಂದನ್ನು ಸೆರೆ ಹಿಡಿಯಲಾಯಿತು.

ನಾಗರಹೊಳೆ ಭಾಗದ ಶಿಬಿರಗಳಿಂದ ಕರೆತರಲಾದ ಐದು ಸಾಕಾನೆಗಳ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿ ಮೂರು ದಿನಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಕನಕಪುರ ತಾಲ್ಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಸಲಗ ಸೆರೆಯಾಯಿತು.

‘ಈ ಭಾಗದಲ್ಲಿ 15ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ಆಗಾಗ್ಗೆ ಬೆಳೆ ನಾಶ ಮಾಡುತ್ತಿವೆ. ಹೀಗಾಗಿ ಇವುಗಳ ಸೆರೆಗೆ ಅನುಮತಿ ಕೋರಲಾಗಿದ್ದು, ಎರಡು ಸಲಗಗಳ ಸೆರೆಗೆ ಅನುಮತಿ ಸಿಕ್ಕಿತ್ತು. ಉಳಿದ ಆನೆಗಳನ್ನು ಕಾಡಿನ ಮೂಲಕವೇ ಕಾವೇರಿ ಮತ್ತು ಮುತ್ತತ್ತಿ ವನ್ಯಧಾಮದತ್ತ ಕಳುಹಿಸುವ ಪ್ರಯತ್ನ ನಡೆಯಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT