ಮಂಗಳವಾರ, ನವೆಂಬರ್ 12, 2019
20 °C

ಸಾಲಬಾಧೆ: ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

Published:
Updated:
Prajavani

ಸಿಂದಗಿ: ತಾಲ್ಲೂಕಿನ ಮೋರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತನೊಬ್ಬ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಸೋಮವಾರ ತಿಳಿದುಬಂದಿದೆ.

ಹಂಚಿನಾಳ ಗ್ರಾಮದ ನಿಂಗಪ್ಪ ಸಿದ್ದಪ್ಪ ದುದ್ದಗಿ (49) ಆತ್ಮಹತ್ಯೆ ಮಾಡಿಕೊಂಡ ರೈತ. ಅ.12ರ ರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

‘ಮೋರಟಗಿಯ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಅವರು ₹ 6ಲಕ್ಷ ಮತ್ತು ಗಬಸಾವಳಗಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ₹ 1ಲಕ್ಷ ಸಾಲ ಪಡೆದಿದ್ದರು. 2–3 ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಫಸಲು ಕೈಗೆ ಬಂದಿರಲಿಲ್ಲ. ಇದರಿಂದಾಗಿ ಸಾಲ ತೀರಿಸಲಾಗದೇ ಬಡ್ಡಿ ಹೆಚ್ಚುತ್ತಲೇ ಸಾಗಿತ್ತು. ಹೀಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೋರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)