ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿ

Last Updated 23 ಡಿಸೆಂಬರ್ 2018, 17:24 IST
ಅಕ್ಷರ ಗಾತ್ರ

ಬಿಡದಿ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಾಗ ಮಾತ್ರ ರೈತ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಬಿಡದಿ ರೈತರ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಂ.ಚಂದ್ರಶೇಖರ್ ಹೇಳಿದರು.

ಇಲ್ಲಿನ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಂಘದ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಯಕ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬ್ಯಾಂಕಿನ ವತಿಯಿಂದ ಉತ್ತಮ ಮಾರ್ಗದರ್ಶನ, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ಪೂರೈಕೆ ಮಾಡಿ ಪ್ರಗತಿ ಹೊಂದಲು ನೆರವಾಗಬೇಕು ಎಂದರು.

ಸಂಘದ ನಿರ್ದೇಶಕ ಮಲ್ಲೇಶ್ ಮಾತನಾಡಿ 1973ರಲ್ಲಿ ಸಿ.ಬೋರಯ್ಯ ಅವರು ಪ್ರಾರಂಭಿಸಿದ ರೈತರ ಸೇವಾ ಸಹಕಾರ ಬ್ಯಾಂಕ್ ಈ ಭಾಗದಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ರೈತರ ಸಹಕಾರಿಯಾಗಿ ಸಾಲ ವಿತರಣೆ, ರಸಗೊಬ್ಬರ ಪೂರೈಕೆ ಮಾಡಿ ಉತ್ತಮ ವಹಿವಾಟು ನಡೆಸುವ ಮೂಲಕ ರೈತಸ್ನೇಹಿ ಸಹಕಾರ ಬ್ಯಾಂಕ್ ಆಗಿ ಸೇವೆ ಸಲ್ಲಿಸುತ್ತಿದೆ ಎಂದರು.

ಪ್ರಗತಿಪರ ರೈತರಾದ ಕೆಂಚನಕುಪ್ಪೆ ರೇಣುಕಾ, ಬಾನಂದೂರು ಜಯಕುಮಾರ್, ಬಿಡದಿ ಭದ್ರಯ್ಯ, ಶೇಷಗಿರಿಹಳ್ಳಿ ದೊಡ್ಡಲಕ್ಕಪ್ಪ, ಹೆಜ್ಜಾಲ ಚಿಕ್ಕಗೋವಿಂದಯ್ಯ, ಬಿಡದಿ ಆಂಜನಪ್ಪ, ಇಟ್ಟಮಡು ಮರೀಗೌಡ, ಗೊಲ್ಲರಪಾಳ್ಯ ಸಂಪಂಗಿರಾಮಯ್ಯ, ಬಿ.ಗೊಲ್ಲಳ್ಳಿ ಬೈರಪ್ಪಗೌಡ, ಕಾಕರಾಮನಹಳ್ಳಿ ಹೊಂಬಯ್ಯ ಅವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಶಿವಯ್ಯ, ನಿರ್ದೇಶಕರಾದ ಬಿ.ಪಿ.ರಾಮು, ಉಮಾ, ನಾಗರಾಜು, ಸತೀಶ್‍ಅರಸು, ಬೈರೇಗೌಡ, ಬಿ.ಸಿ.ಶಿವಕುಮಾರ್, ಲಕ್ಷ್ಮಿಕೆಂಪಯ್ಯ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸೀನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT