ಅರಳಾಳುಸಂದ್ರ: ಸಾಲ ಬಾಧೆ, ರೈತ ಆತ್ಮಹತ್ಯೆ

7

ಅರಳಾಳುಸಂದ್ರ: ಸಾಲ ಬಾಧೆ, ರೈತ ಆತ್ಮಹತ್ಯೆ

Published:
Updated:
Deccan Herald

ಬಿಡದಿ (ರಾಮನಗರ): ಸಾಲಬಾಧೆಯಿಂದಾಗಿ ಇಲ್ಲಿನ ಅರಳಾಳುಸಂದ್ರ ನಿವಾಸಿ ಮಹದೇವಯ್ಯ (52) ಸೋಮವಾರ ಮುಂಜಾನೆ ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಟ್ರ್ಯಾಕ್ಟರ್‌ ಖರೀದಿಗಾಗಿ ಅವರು ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ಸಾಲ ಪಡೆದಿದ್ದರು. ಆದರೆ ಅದನ್ನು ತೀರಿಸಿರಲಿಲ್ಲ. ಹೀಗಾಗಿ ಫೈನಾನ್ಸ್‌ನ ಸಿಬ್ಬಂದಿ ಶನಿವಾರ ಮನೆಗೆ ಬಂದು ನೋಟಿಸ್ ನೀಡಿದ್ದು, ಸೋಮವಾರ ಹಣ ಪಾವತಿ ಮಾಡದೇ ಹೋದಲ್ಲಿ ವಾಹನವನ್ನು ಜಪ್ತಿ ಮಾಡುವುದಾಗಿ ಎಚ್ಚರಿಸಿದ್ದರು. ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು.

ಮಹದೇವಯ್ಯ ಟ್ರ್ಯಾಕ್ಟರ್ ಸಾಲದ ಜೊತೆಗೆ ಇತರ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ಲೇವಾದೇವಿಗಾರರಿಂದಲೂ ಸಾಲ ಪಡೆದಿದ್ದರು. ಈಚೆಗೆ ಮಗಳ ಮದುವೆಗಾಗಿ ಹಣ ವ್ಯಯಿಸಿದ್ದರು. ಮನೆ ಮೇಲೆಯೂ ಸಾಲ ಇತ್ತು. ಎಲ್ಲದರಿಂದ ಸುಮಾರು ₨15 ಲಕ್ಷದಷ್ಟು ಸಾಲವಿತ್ತು ಎಂದು ಅವರ ನಿಕಟವರ್ತಿಗಳು ತಿಳಿಸಿದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !