ದರ ಕುಸಿತ: ರೈತರಿಂದ ಆತ್ಮಹತ್ಯೆ ಯತ್ನ

7
ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬೆಳೆಗಾರರಿಂದ ಪ್ರತಿಭಟನೆ

ದರ ಕುಸಿತ: ರೈತರಿಂದ ಆತ್ಮಹತ್ಯೆ ಯತ್ನ

Published:
Updated:
Deccan Herald

ರಾಮನಗರ: ರೇಷ್ಮೆಗೂಡು ದರ ಕುಸಿತದ ಕಾರಣ ಬೇಸರಗೊಂಡು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗುರುವಾರ ನಡೆಯಿತು.

ಬೆಳಗ್ಗೆ 9.30ಕ್ಕೆ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆಯು ಆರಂಭಗೊಂಡಿತು. ರೀಲರ್‌ಗಳು ಕೆ.ಜಿ. ಗೂಡಿಗೆ ₨100–150 ದರ ನಿಗದಿಗೊಳಿಸಿದರು. ಇದರಿಂದ ಮನನೊಂದ ರೈತರು ಡೆತ್‌ನೋಟ್‌ ಬರೆದುಕೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭ ರೈತನೊಬ್ಬ ವಿಷ ಸೇವಿಸಲು ಮುಂದಾಗಿದ್ದು, ಪೊಲೀಸರು ತಡೆದರು.

‘ಈ ಹಿಂದೆ ಪ್ರತಿ ಕೆ.ಜಿ.ಗೆ ₨350–400 ಇದ್ದ ಗೂಡಿನ ಬೆಲೆಯು ಈಗ ₨100ಕ್ಕೆ ಇಳಿದಿದೆ. ಈ ಬೆಲೆಗೆ ಗೂಡನ್ನು ಮಾರಲು ಆಗದು. ಸಾಲ ಮಾಡಿ ಗೂಡು ಬೆಳೆದ ನಮಗೆ ಇದರಿಂದ ಭಾರಿ ನಷ್ಟವಾಗುತ್ತಿದ್ದು, ಆತ್ಯಹತ್ಯೆಗೆ ದಾರಿಯಾಗಿದೆ’ ಎಂದು ಮಾರುಕಟ್ಟೆಗೆ ಬಂದ ರೈತರು ಅಳಲು ತೋಡಿಕೊಂಡರು.

ಮುಖ್ಯಮಂತ್ರಿ ಕುಮಾರಸ್ವಾಮಿ ರೇಷ್ಮೆಗೂಡಿಗೆ ಪ್ರೋತ್ಸಾಹ ಧನ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಅವೈಜ್ಞಾನಿಕ ಮಾನದಂಡಗಳಿಂದಾಗಿ ಹೆಚ್ಚಿನ ರೈತರಿಗೆ ಇದರ ನೆರವು ಲಭಿಸುತ್ತಿಲ್ಲ. ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಿ ಸಂಕಷ್ಟದಲ್ಲಿ ಇರುವ ಬೆಳೆಗಾರರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಸರ್ಕಾರವು ಸದ್ಯ ಘೋಷಣೆ ಮಾಡಿರುವ ಪ್ರೋತ್ಸಾಹ ಧನ ಯೋಜನೆಯನ್ನು ಹಿಂಪಡೆದು ಗೂಡಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬಸವರಾಜು ಸಮಿತಿ ವರದಿಯಂತೆ ರೇಷ್ಮೆಗೂಡಿಗೆ ಕನಿಷ್ಠ ₨300–350 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಧಾನ: ಬೆಳಿಗ್ಗೆ 11ವರೆಗೂ ಪ್ರತಿಭಟನೆಯು ಮುಂದುವರಿದಿತ್ತು. ಪ್ರತಿಭಟನಾ ನಿರತರ ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಮಾತುಕತೆ ನಡೆಸಿದರು. ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮನವೊಲಿಸಿದರು. ಇದರಿಂದಾಗಿ ರೈತರು ಪ್ರತಿಭಟನೆ ಹಿಂಪಡೆದಿದ್ದು, ಹರಾಜು ಪ್ರಕ್ರಿಯೆಯು ಮುಂದುವರಿಯಿತು.

***
ಇಂದಿನ ಮಾರುಕಟ್ಟೆಯಲ್ಲಿ ₨100–150ಕ್ಕೆ ಗೂಡು ಹರಾಜಾಗಿದ್ದು, ಖರ್ಚಿನ ಅರ್ಧದಷ್ಟು ಬೆಲೆಯೂ ಸಿಕ್ಕಿಲ್ಲ. ಹೀಗಾದರೆ ಗೂಡು ಏತಕ್ಕೆ ಬೆಳೆಯಬೇಕು
ರಮೇಶ್‌, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !