ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ

7

ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ

Published:
Updated:
Prajavani

ರಾಮನಗರ: ಇಲ್ಲಿನ ಐಜೂರು ಗುಡ್ಡೆ ಪ್ರದೇಶದಲ್ಲಿ ಬುಧವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮವಾಗಿದೆ.

ಲಕ್ಷ್ಮಮ್ಮ ಕೃಷ್ಣಪ್ಪ ದಂಪತಿಗೆ ಸೇರಿದ ಗುಡಿಸಲು ಬೆಂಕಿಗೆ ಭಸ್ಮವಾಗಿದೆ. ಮನೆಯಲ್ಲಿದ್ದ ಪಾತ್ರೆ ಪರಿಕರಗಳು, ಬಟ್ಟೆ, ಅಕ್ಕಿ, ರಾಗಿ, ₨5 ಸಾವಿರ ನಗದು ಸುಟ್ಟು ಕರಕಲಾಗಿದೆ. ಸುಮಾರು ₨50 ಸಾವಿರಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ. ಈ ಘಟನೆಯಿಂದ ವಯೋವೃದ್ಧರಾದ ದಂಪತಿ ಕಂಗಾಲಾಗಿದ್ದಾರೆ.

ಐಜೂರು ಗುಡ್ಡೆಯಲ್ಲಿ ಸುಮಾರು 30 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಾ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಗುಡಿಸಲಿಗೆ ಬೆಂಕಿ ಬಿದ್ದಾಗ ಮನೆಯಲ್ಲಿ ದಂಪತಿ ಇರಲಿಲ್ಲ. ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಉಪಯೋಗವಾಗಿಲ್ಲ.

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !