ರಾಗಿಮೆದೆಗೆ ಬೆಂಕಿ: ಸಂಪೂರ್ಣ ಭಸ್ಮ

7

ರಾಗಿಮೆದೆಗೆ ಬೆಂಕಿ: ಸಂಪೂರ್ಣ ಭಸ್ಮ

Published:
Updated:
Prajavani

ಮಾಡಬಾಳ್‌(ಮಾಗಡಿ): ಕೊಟ್ಟಗಾರಹಳ್ಳಿಯಲ್ಲಿ ಮಂಗಳವಾರ ರಾತ್ರಿ ತೆನೆ ಇದ್ದ ರಾಗಿಮೆದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ದಲಿತ ಪೂಜಾರಿ ನಂಜುಂಡಯ್ಯ ಅವರು ಹೊಲದಲ್ಲಿ ಬಣವೆ ಮಾಡಿದ್ದ ತೆನೆಸಹಿತ ರಾಗಿಮೆದೆಗೆ ಬೆಂಕಿ ಹಚ್ಚಿದ್ದರಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಂದಾಜು ₹30 ಸಾವಿರ ಬೆಲೆಬಾಳುವ ರಾಗಿಬಣವೆ ಸುಟ್ಟು ಭಸ್ಮವಾಗಿದೆ. ಸಾಕಿರುವ ಹಸು ಮತ್ತು ಕರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತ ಸಂಕಟ ತೋಡಿಕೊಂಡಿದ್ದಾರೆ.

‘ರೈತನಿಗೆ ನಷ್ಟವಾಗಿದೆ. ಈ ನಷ್ಟ ತುಂಬಿಸಿಕೊಡಬೇಕು’ ಎಂದು ಮುಖಂಡ ಉಮೇಶ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !