ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ಆರೋಗ್ಯ ಸೇವೆ: ರೋಗಿ ಮೆಚ್ಚುಗೆ

ಐವರು ಗುಣಮುಖ: ಕೋವಿಡ್‌ 19 ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
Last Updated 1 ಮೇ 2020, 11:51 IST
ಅಕ್ಷರ ಗಾತ್ರ

ವಿಜಯಪುರ: ‘ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಾದ ಪರಿಣಾಮ ನಾನು ಕೊರೊನಾ ರೋಗದಿಂದ ಗುಣಮುಖವಾಗಿ ಹೊರಬಂದಿದ್ದೇನೆ’ ಎಂದು 36 ವರ್ಷ ವಯೋಮಾನದ ರೋಗಿ(ಪಿ308) ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಕೋವಿಡ್‌ 19 ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾದ ಬಳಿಕ ಅವರು ಮಾತನಾಡಿದರು.

‘ಕೋವಿಡ್-19 ತಗುಲಿದ ತಕ್ಷಣ ಅತ್ಯಂತ ವಿಚಲಿತ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರ್ಪಡೆಯಾದೆ. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಎಲ್ಲ ವೈದ್ಯರ, ಸಿಬ್ಬಂದಿಯ ಅಪಾರ ನೆರವಿನ ಫಲವಾಗಿ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಯಿತು’ ಎಂದರು.

ಸರ್ಕಾರದ ‘ಆಪ್ತಮಿತ್ರ’ ಆ್ಯಪ್ ಕೂಡಾ ಅವಶ್ಯಕ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ. ಮಾನಸಿಕವಾಗಿ ಸದೃಢಗೊಳಿಸಲು ವೈದ್ಯರು ಅಪಾರವಾಗಿ ನೆರವಾಗಿದ್ದು, ಮನೆ ಸ್ಯಾನಿಟೈಸ್ ಮಾಡಲು ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ನೆರವಾಗಿದಕ್ಕೆ ಅಭಿನಂದನೆ ಸಲ್ಲಿಸಿದರು.

ಕೋವಿಡ್‌ನಿಂದ ಮುಕ್ತರಾಗಲು ಪ್ರತಿಯೊಬ್ಬ ರೋಗಿ ತಪ್ಪದೇ ಪ್ರಾಮಾಣಿಕವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪ್ರಯಾಣ ವಿವರ ನೀಡಬೇಕು. ಯಾವುದೇ ಮಾಹಿತಿಯನ್ನು ಮುಚ್ಚಿಡದೇ ವೈದ್ಯರಿಗೆ ಸಹಕರಿಸಿ, ಈ ರೋಗದಿಂದ ಮುಕ್ತವಾಗುವಂತೆ ಮನವಿ ಮಾಡಿದರು.

ಕೋವಿಡ್ ರೋಗದಿಂದ ಗುಣಮುಖ ಪಡಿಸುವಲ್ಲಿ ನೆರವಾಗಿರುವ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಐವರು ಬಿಡುಗಡೆ: ಕೋವಿಡ್-19 ಸೋಂಕಿನಿಂದ ಗುಣಮುಖರಾದ ಐವರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.

ಒಂದೂವರೆ ವರ್ಷದ ಹೆಣ್ಣುಮಗು (ಪಿ310), 65(ಪಿ306), 62(ಪಿ307) ಮತ್ತು 60 ವರ್ಷ ವಯಸ್ಸಿನ(ಪಿ362) ಮೂವರು ವೃದ್ದರು ಹಾಗೂ 36 ವರ್ಷ ವಯೋಮಾನದ (ಪಿ308) ಮತ್ತೊಬ್ಬರು ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದರು.

ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ, ಡೈಫ್ರೂಟ್ಸ್ ನೀಡಿ ಸ್ವಾಗತಿಸಿದರು.

ಜಿಲ್ಲೆಯಲ್ಲಿ ಈವರೆಗೆ11 ಕೋವಿಡ್ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಆಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜೆ. ಬಿರಾದಾರ, ಡಾ. ಶೈಲಶ್ರೀ ಎಂ, ಮೇಲ್ವಿಚಾರಕ ಅಜೀತ, ಪಿಎಸ್‍ಐ ಶಿವಕುಮಾರ, ನರ್ಸ್‌ ಶಾಂತಾ, ಸುಜಾತಾ ಮತ್ತು ಮೋಮಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT