ಭಾನುವಾರ, ಆಗಸ್ಟ್ 25, 2019
28 °C

ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

Published:
Updated:
Prajavani

ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕು ಹಿರೇಮಸಳಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಈಚೆಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಶೂರ್ಪಾಲಿ, ತುಬಚಿ, ಜಿಂಜರವಾಡ, ನಾಕೂರ ಗ್ರಾಮದ ಸಂತ್ರಸ್ತರಿಗೆ ಹಿರೇಮಸಳಿ ಗ್ರಾಮಸ್ಥರು, ಬಸವ ಸೇನೆ ಗೆಳೆಯರ ಬಳಗದಿಂದ ಅಕ್ಕಿ, ಗೋಧಿ, ಬಿಸ್ಕತ್, ಬಟ್ಟೆ, ತರಕಾರಿಯನ್ನು ವಿತರಿಸಲಾಯಿತು.

ಸಂತೋಷ ವಾಲೀಕಾರ, ಶಿವಾನಂದ ಕ್ಷತ್ರಿ, ಬೋಜಪ್ಪ ಚಾಂದಕವಠೆ, ಸೋಮು ಪಟ್ಟಣ್ಣಶೆಟ್ಟಿ, ಸಂಜು ರಜಪೂತ, ಶರಣು ಹತ್ತಿ, ಬಸವರಾಜ ಚಾಂದಕವಟೆ, ಗುರುರಾಜ ಪಾಟೀಲ, ಶಿವಾನಂದ ಮಾದನಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ರಾಜು ಹುಬ್ಬಳ್ಳಿ, ಪ್ರಶಾಂತ ಬೀಳಗಿ ಮಠ, ಅದೃಶ್ಯಪ್ಪ ವಾಲಿ, ಗ್ರಾಮದ ಹಿರಿಯರಾದ ರೇವಪ್ಪ ಲಚ್ಯಾಣ, ರಾಜುಗೌಡ ಪಾಟೀಲ, ಗಿರಿಗೌಡ ಪಾಟೀಲ ಇದ್ದರು.

ಸಂತ್ರಸ್ತರಿಗೆ ನೆರವು: ನಗರದ ಗುಜರೊ ಕರಾಟೆ ಡು ಕೆನರೊಕಾನ್ ಇಂಡಿಯಾ ಸಂಸ್ಥೆ ವತಿಯಿಂದ ನೆರೆ ಸಂತ್ರಸ್ತರಿಗೆ ಈಚೆಗೆ ಬೆಡ್‌ಶೀಟ್, ಟಾವೆಲ್, ಸೀರೆ, ಪಾತ್ರೆ, ಅಕ್ಕಿ, ಗೋಧಿ ಹಿಟ್ಟು, ತರಕಾರಿ, ಹಾಲು, ಹಣ್ಣು ವಿತರಿಸಲಾಯಿತು.

ಜಮಖಂಡಿ ತಾಲ್ಲೂಕಿನ ನೆರೆಪೀಡಿತ ನಾಗನೂರ, ಜಂಬಗಿ ಮತ್ತು ಸುತ್ತಮುತ್ತಲಿನ ಪರಿಹಾರ ಕೇಂದ್ರಗಳಲ್ಲಿರುವ ಜನರಿಗೆ ವಿತರಿಸಲಾಯಿತು. ಕರಾಟೆ ಮಾಸ್ಟರ್‌ ಸೋಮನಗೌಡ ಕಲ್ಲೂರ ನೇತೃತ್ವ ವಹಿಸಿದ್ದರು.

Post Comments (+)