ಶನಿವಾರ, ಡಿಸೆಂಬರ್ 14, 2019
24 °C

ಸಂತ್ರಸ್ತರಿಗೆ ತಲುಪದ ಪರಿಹಾರ: ಕಾಂಗ್ರೆಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಸರ್ಕಾರ ಘೋಷಿಸಿದ ಪರಿಹಾರ ಇದುವರೆಗೂ ತಲುಪಿಲ್ಲ. ಅಧಿಕಾರಿಗಳು ಕೆಲವರಿಗೆ ಪುಡಿಗಾಸು ನೀಡಿ ಸುಮ್ಮನಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಟೀಕಿಸಿದರು.

ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಸಂತ್ರಸ್ತರಾದ ಅಂಗಳಯ್ಯನ ಕೆರೆ, ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾಗಳ ಹಲವು ಕುಟುಂಬಗಳನ್ನು ಗುರುವಾರ ಭೇಟಿಯಾದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಸಂತ್ರಸ್ತ ಕುಟುಂಬಗಳಿಗೆ 1 ಲಕ್ಷ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ₨ 5 ಲಕ್ಷ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಎರಡು ತಿಂಗಳು ಕಳೆದರೂ ಯಾವುದೇ ಪರಹಾರ ನೀಡಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ನೀಡಲಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಪರಿಹಾರ ಮಾತ್ರ ಯಾರಿಗೂ ಬಂದಿಲ್ಲ. ಕೆಲವರಿಗೆ ₨ 10 ಸಾವಿರ ನೀಡಲಾಗಿದೆ ಎಂದು ದೂರಿದರು.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲೇ ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನೂರಾರು ಮನೆಗಳು ಬಿದ್ದುಹೋಗಿವೆ. ಇಂತಹ ಸಂತ್ರಸ್ತರ ನೆರವಿಗೆ ಬಾರದೆ ಬಿಜೆಪಿ ಸರ್ಕಾರ ಆಪರೇಷನ್ ಕಮಲ, ಉಪ ಚುನಾವಣೆ ಎನ್ನುತ್ತಾ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಆರೋಪಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಸದಸ್ಯೆ ಯಮುನಾ ರಂಗನಾಥ್, ಮಾಜಿ ಸದಸ್ಯ ಪಂಡಿತ್ ವಿ.ವಿಶ್ವನಾಥ್, ಮುಖಂಡರಾದ ಚಂದ್ರಭೂಪಾಲ್, ನಾಗರಾಜ್, ರಾಮೇಗೌಡ, ಅಫ್ರಿದಿ, ನಾಜಿಮಾ, ಎಸ್.ಪಿ.ಶೇಷಾದ್ರಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)