ಮಂಜು ಮಸುಕಿದ ವಾತಾವರಣ

7

ಮಂಜು ಮಸುಕಿದ ವಾತಾವರಣ

Published:
Updated:
Prajavani

ಮಾಗಡಿ: ತಾಲ್ಲೂಕಿನಲ್ಲಿ ಸತತವಾಗಿ 5ನೇ ದಿನವೂ ವಿಪರೀತ ಮಂಜು ಮುಸುಕಿದ ವಾತಾವರಣ ಇತ್ತು. ಬೆಳಿಗ್ಗೆ 10ಗಂಟೆಯಾದರೂ ಕೊರೆಯುವ ಚಳಿ ಕಡಿಮೆಯಾಗುವುದಿಲ್ಲ. ಸೋಮವಾರ ಬೆಳಿಗ್ಗೆ 10ರವರೆಗೂ  ಸೂರ್ಯ ದರ್ಶನವಾಗಲಿಲ್ಲ. ಮೋಡದ ಮರೆಯಲ್ಲಿದ್ದ ಸೂರ್ಯನ ರಶ್ಮಿಗಳು ಭೂಮಿಗೆ ತಲುಪದಂತೆ ಮಂಜು ಮುಸಕಿತ್ತು ಎಂದು ಕರ್ನಾಟಕ ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾಣ್ಯಂ ನಟರಾಜ್‌ ತಿಳಿಸಿದರು.

ತಾಲ್ಲೂಕಿನಲ್ಲಿ ನಿಸರ್ಗ ಸಂಪತ್ತು ನಾಶವಾಗುತ್ತಿದೆ. ಕೆರೆ ಗೋಕಟ್ಟೆ, ಹಳ್ಳ – ಕೊಳ್ಳಗಳನ್ನು ಮುಚ್ಚಲಾಗುತ್ತಿದೆ. ಕಾಡು ಕಡಿಮೆಯಾಗುತ್ತಿರುವುದು ವಾತಾವರಣದ ಮೇಲೆ ದುಷ್ಪರಿಣಾಮ ಬೀರಿ ವಿಪರೀತ ಚಳಿ, ಮಂಜು ಮುಸುಕಲು ಕಾರಣವಾಗಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ವನಸಂಪತ್ತು ಬೆಳೆಸಲು ಮುಂದಾಗಬೇಕು. ವಾತಾವರಣ ಸಮತೋಲನದಿಂದ ಕೂಡಿದ್ದಾಗ ಮಾತ್ರ ಸೂಕ್ತ ಹವಾಮಾನ ಇರುತ್ತದೆ ಎಂದರು.

ನಿಸರ್ಗ ಸಂಪತ್ತು ರಕ್ಷಿಸಲು ಎಲ್ಲರೂ ಅರಿವು ಮೂಡಿಸಬೇಕು ಎಂದು ಪ್ರಾಂಶುಪಾಲ ಎಂ.ಸಿ. ಗೋವಿಂದರಾಜು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !