‘ಮಕ್ಕಳಲ್ಲಿ ಅಂಬೇಡ್ಕರ್‌ ವಿಚಾರಧಾರೆ ಬಿತ್ತಿ’

7

‘ಮಕ್ಕಳಲ್ಲಿ ಅಂಬೇಡ್ಕರ್‌ ವಿಚಾರಧಾರೆ ಬಿತ್ತಿ’

Published:
Updated:
Deccan Herald

ಮಾಗಡಿ: ಅಂಬೇಡ್ಕರ್‌ ಬಾಲ್ಯ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಮಕ್ಕಳಿಗೆ ತಿಳಿಸಿ ಕೊಡುವ ಮೂಲಕ ಹೋರಾಟದ ಗುಣ ಬೆಳೆಸಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ.ವಿ.ಜಯರಾಮು ಸಲಹೆ ನೀಡಿದರು.

ರಾಜೀವ್‌ ಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಅಂಬೇಡ್ಕರ್‌ ಪರಿನಿರ್ವಾಣ ದಿನದ ಸವಿನೆನಪಿಗಾಗಿ ಉಚಿತ ಲೇಖನ ಸಾಮಗ್ರಿ ಮತ್ತು ನೋಟ್‌ ಪುಸ್ತಕ ವಿತರಿಸಿ ಮಾತನಾಡಿದರು.

ಕಡುಬಡತನದಲ್ಲೂ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿದವರು ಅಂಬೇಡ್ಕರ್‌. ದೇಶ – ವಿದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಮಕ್ಕಳಿಗೆ ಆದರ್ಶಪ್ರಾಯರು. ಮಕ್ಕಳ ಮನಸ್ಸಿನಲ್ಲಿ ಅಂಬೇಡ್ಕರ್‌ ಉಳಿಯುವಂತಹ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಬೇಕು. ಆ ಮೂಲಕ ಎಳೆವೆಯಲ್ಲಿಯೇ ಅಧ್ಯಯನಶೀಲತೆ ಬೆಳೆಸಬೇಕು. ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಅಂಬೇಡ್ಕರ್‌ ಕಂಚಿನ ಪುತ್ಥಳಿ ಸ್ಥಾಪಿಸಬೇಕಿದೆ ಎಂದರು.

ಕಾಂಗ್ರೆಸ್‌ ಮುಖಂಡ ಕೃಪಾಕರ ಮಾತನಾಡಿ, ಕೆಸರಿನಲ್ಲಿ ಅರಳಿದ ಕಮಲ ಅಂಬೇಡ್ಕರ್‌. ಅವರ ಬದುಕಿನ ಬಗ್ಗೆ ನಾವೆಲ್ಲರೂ ಅಧ್ಯಯನ ಮಾಡಬೇಕಿದೆ. ಕೊಳಚೆ ನಿರ್ಮೂಲನಾ ಮಂಡಳಿ ಬಡಾವಣೆ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ವಿವಿಧ ಸವಲತ್ತುಗಳನ್ನು ದೊರಕಿಸಿಕೊಡುವ ಮೂಲಕ ಅಂಬೇಡ್ಕರ್‌ ಪರಿನಿರ್ವಾಣ ದಿನ ಆಚರಿಸುತ್ತಿರುವ ಪದ್ಮಾವತಿ ಜಯರಾಮ್‌ ಅವರ ಸೇವೆ ಸ್ಮರಣೀಯವಾದುದು ಎಂದರು.

ಮುಖ್ಯಶಿಕ್ಷಕಿ ಉಮಾದೇವಿ.ಬಿ, ಸಹಶಿಕ್ಷಕಿ ನಿರ್ಮಲ.ಆರ್‌, ಅಂಗನವಾಡಿ ಕಾರ್ಯಕರ್ತೆ ಲಕ್ಕಮ್ಮ, ಸಹಾಯಕಿ ಪಾರ್ವತಿ ಮತ್ತು ಸ್ವಯಂ ಸೇವಕ ಸಿದ್ದರಾಜು ಮಾತನಾಡಿದರು. 50 ಪುಟಾಣಿಗಳಿಗೆ ಸವಲತ್ತು ನೀಡಲಾಯಿತು. ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ರಾಜೀವ್‌ ಗಾಂಧಿ ನಗರದ ನಿವಾಸಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !