ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳಿಗೂ ನಿತ್ಯ ಊಟ; ಪ್ರಾಣಿಪ್ರಿಯರ ಸೇವೆ

Last Updated 2 ಏಪ್ರಿಲ್ 2020, 13:26 IST
ಅಕ್ಷರ ಗಾತ್ರ

ಶಿವಮೊಗ್ಗ: ಹಲವು ಸಂಘ ಸಂಸ್ಥೆಗಳು, ಜಿಲ್ಲಾಡಳಿತ ಹಸಿದ ಜನರಿಗೆ ಅನ್ನ ನೀಡುವ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರಾಣಿಪ್ರಿಯರ ತಂಡಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿದೆ.

ನಗರದಕೆನಿತ್ ಹರ್ಷ, ನೈನಾ, ಬಿಂದೂ ರಾಣಿ, ನಿಖಿಲ್ ರೇನುನಾತನ್, ಸಬೀಹ ಶಿರ್ಕೋಲ್, ಮಂಜು ದೊಡ್ಮನೆ, ಸಂಹಿತಾ ಅವರ ತಂಡ ವಿವಿಧೆಡೆ ಪ್ರತಿದಿನ ಬೆಳಗ್ಗೆ ಆಹಾರ ಸಿದ್ಧಪಡಿಸಿ ತಾವೇ ಹೋಗಿ 75ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಇವರ ಕೆಲಸ ಆರಂಭವಾಗುತ್ತದೆ.ಆಲ್ಕೊಳ, ಆಟೊಕಾಂಪ್ಲೆಕ್ಸ್, ವಿನೋಬನಗರ, ಗೋಪಾಲಗೌಡ ಬಡಾವಣೆ, ಜೆ.ಎಚ್.ಪಾಟೇಲ್ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲು ಬೀದಿ ನಾಯಿಗಳಿಗೆ ಅನ್ನ, ಮೊಸರು, ಡಾಗ್ ಫುಡ್ ಕೊಡುತ್ತಿದ್ದಾರೆ.ಅಡಿಕೆ ಹಾಳೆಯ ತಟ್ಟೆ ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT