ಅಂಗವಿಕಲರಿಗೆ ಉಚಿತ ಬಸ್‌ ಪ್ರಯಾಣ

7

ಅಂಗವಿಕಲರಿಗೆ ಉಚಿತ ಬಸ್‌ ಪ್ರಯಾಣ

Published:
Updated:
Prajavani

ಮಾಗಡಿ: ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಎಲ್‌.ವಿ.ಟ್ರಾವೆಲ್ಸ್‌ ಮಾಲೀಕ ಪರಮೇಶ್ವರ್‌ ತಿಳಿಸಿದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಹೊಡೆಗಟ್ಟ ಮತ್ತು ಬೆಂಗಳೂರು ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‌

ಬಸ್‌ಗಳಲ್ಲಿ ಅಂಗವಿಕಲರು ಉಚಿತವಾಗಿ ಪ್ರಯಾಣಿಸಲು ಅನುಕೂಲವಿದೆ. ಅವರಿಗೆ ಬೇಕಾದ ಕುಡಿಯುವ ನೀರಿಗೆ ಅನುಕೂಲವಿದೆ. ಬಸ್‌ಗಳು ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಹೊಡೆಗಟ್ಟ ತಲುಪಿ ನಂತರ ನಗರದತ್ತ ಪ್ರಯಾಣಿಸಲಿದೆ. ನಿತ್ಯ ಅಂಗವಿಕಲರು ಬಸ್‌ಗಳಲ್ಲಿ ಪ್ರಯಾಣಿಸಬಹುದು. ಆದರೆ, ಬಸ್‌ ಪ್ರಯಾಣ ದರ ಎಂದಿನಂತೆ ಇರಲಿದೆ ಎಂದು ತಿಳಿಸಿದರು.

ಖಾಸಗಿ ಬಸ್‌ ಏಜೆಂಟರಾದ ಕಲ್ಯದ ರಾಜಣ್ಣ, ಹೊಸಪೇಟೆಸ್ವಾಮಿ, ಎಚ್‌.ಆರ್‌.ಬ್ಯಾಟಪ್ಪ ಎಲ್‌.ವಿ.ಟ್ರಾವೆಲ್ಸ್‌ ಮಾಲೀಕರ ಸೇವೆ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !