7ರಂದು ಕ್ಯಾನ್ಸರ್, ಪ್ಯಾರಾಲಿಸಿಸ್‌ ಉಚಿತ ತಪಾಸಣೆ

7

7ರಂದು ಕ್ಯಾನ್ಸರ್, ಪ್ಯಾರಾಲಿಸಿಸ್‌ ಉಚಿತ ತಪಾಸಣೆ

Published:
Updated:

ಶಿವಮೊಗ್ಗ: ಇಲ್ಲಿನ ಬಿ.ಎಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಅ.7ರಂದು 9ರಿಂದ ಕ್ಯಾನ್ಸರ್ ಹಾಗೂ ಪ್ಯಾರಾಲಿಸಿಸ್ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶರಣ್ಯ ಶಿವಮೊಗ್ಗ, ಆರೋಗ್ಯ ಭಾರತಿ ಜಿಲ್ಲಾ ಘಟಕ, ವಿಕಾಸ ಟ್ರಸ್ಟ್ ಹಾಗೂ ಗಾಯತ್ರಿ ಪ್ರತಿಷ್ಠಾನಗಳ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ತಜ್ಞ ವೈದ್ಯರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಿ.ಎಲ್. ಮಂಜುನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ಗಂಟೆವರೆಗೆ ನಡೆಯುವ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಎನ್. ರಮೇಶ್, ಡಾ.ಸಾತ್ವಿಕ್, ಡಾ.ನಡಹಳ್ಳಿ ರವಿ, ಡಾ.ಡಿ.ಜೆ. ತಾನಾಜಿ ಭಾಗವಹಿಸುವರು. ಬೆಳಿಗ್ಗೆ 9ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶರಣ್ಯ ಸಂಸ್ಥೆ ಗೌರವಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸಲಿದ್ದಾರೆ. ವಿಕಾಸ ಟ್ರಸ್ಟ್‌ಟ್ರಸ್ಟಿ ಪಾಂಡುರಂಗ ಪರಾಂಡೆ, ಆರೋಗ್ಯ ಭಾರತಿ ವಿಭಾಗೀಯ ಸಂಯೋಜಕ ಎನ್. ಶ್ರೀಧರ್ ಭಾಗವಹಿಸುವರು. ಆರೋಗ್ಯ ಭಾರತಿ ಅಧ್ಯಕ್ಷ ಡಾ. ಎ.ಎಂ. ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌: 99457 76583, 99648 19294 ಸಂಪರ್ಕಿಸಬಹುದು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಡಿ.ಜೆ. ತಾನೋಜಿ, ಎನ್. ಶ್ರೀಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !