ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ₹2.45 ಲಕ್ಷ ಮೌಲ್ಯದ ಗಾಂಜಾ ವಶ

Last Updated 23 ಅಕ್ಟೋಬರ್ 2021, 3:59 IST
ಅಕ್ಷರ ಗಾತ್ರ

ಗದಗ: ತಾಲ್ಲೂಕಿನ ಮದಗಾನೂರು ಮತ್ತು ಬೇಳಹೊಡ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದಿದ್ದ 25 ಕೆ.ಜಿ. ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಹುಚ್ಚಪ್ಪ ಬಸಪ್ಪ ತಳ್ವಾರ್, ಆಯ್ಯನಗೌಡ ರಾಮೇಗೌಡ ಗೌಡಪ್ಪಗೌಡ ಮತ್ತು ತಿಪ್ಪನಗೌಡ ನಿಂಗನಗೌಡ ಇವರಿಗೆ ಸೇರಿದ ಹೊಲಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ದಾಳಿ ನಡೆಸಿ, ಅಂದಾಜು ₹2.45 ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಗದಗ ಉಪ ವಿಭಾಗ ಹಾಗೂ ಗದಗ ವಲಯದ ಅಧಿಕಾರಿಗಳು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ಉಪ ಆಯುಕ್ತ ಎಂ.ರವೀಂದ್ರ, ಅಬಕಾರಿ ಉಪ ಅಧೀಕ್ಷಕ ಮಂಜುನಾಥ್ ಮಾಲಿಪಾಟೀಲ, ಅಬಕಾರಿ ನಿರೀಕ್ಷಕರಾದ ನಾರಾಯಣ ಸಾ. ಪವಾರ್, ಶೈನಾಜ್ ಬೇಗಂ, ಪರುಶುರಾಮ್ ವಡ್ಡರ, ವಿವೇಕಾನಂದ ಮಂಕಳೆ, ಅಬಕಾರಿ ಉಪ ನಿರೀಕ್ಷಕ ಗಜಕೋಷ್, ಸಿಬ್ಬಂದಿಯಾದ ಗಿರೀಶ್ ಮುದರೆಡ್ಡಿ, ಗುರು ವಸ್ತ್ರದ, ಚಂದ್ರು ರಾಥೋಡ್, ಇಸ್ಮಾಯಿಲ್, ರಾಜಶೇಖರಪ್ಪ, ಮಳೇಕರ್, ಅಂಬೋಜಿ ಹಾಳಕೆರಿ, ಮಂಜುನಾಥ್ ರಯನಗೌಡ್ರು, ಸಿದ್ದಪ್ಪ ಹಿರೆತನ, ವಿಶಾಲ ಮಾಳಗಿ, ರುದ್ರೇಶ್, ಹನುಮಂತ, ಸದಾನಂದ, ವಾಹನ ಚಾಲಕರಾದ ಬಸ್ಕಾರ್ ರೆಡ್ಡಿ, ಬುದನ್ನಾ,ಅಶೋಕ್, ಮೆಹಬೂಬ್‌ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT