ಶನಿವಾರ, ಆಗಸ್ಟ್ 20, 2022
21 °C

ಗದಗ: ಜಿಲ್ಲೆಯಲ್ಲಿ 39 ಮಂದಿಗೆ ಕೋವಿಡ್‌ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿ ಮತ್ತೆ 39 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ತಾಲ್ಲೂಕಿನಲ್ಲಿ 12, ಮುಂಡರಗಿ 5, ನರಗುಂದ 5, ರೋಣ 11, ಶಿರಹಟ್ಟಿ 5 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ಹುಡ್ಕೋ ಕಾಲೊನಿ, ಬ್ಯಾಂಕರ್ಸ್‌ ಕಾಲೊನಿ, ಜಿಮ್ಸ್‌, ಭೂಮರೆಡ್ಡಿ ವೃತ್ತ, ಕಳಸಾಪುರ ರಸ್ತೆ, ಶಿವಾನಂದ ನಗರ, ಮುಳಗುಂದ ರಸ್ತೆ, ಗದಗ ತಾಲ್ಲೂಕಿನ ಕಳಸಾಪುರ, ಚಿಕ್ಕ ಹಂದಿಗೋಳ, ನಾಗಾವಿ ತಾಂಡಾ, ಹೊಂಬಳ.

ಮುಂಡರಗಿ ಪಟ್ಟಣದ ಬಸ್‌ ನಿಲ್ದಾಣದ ರಸ್ತೆ, ಮುಂಡರಗಿ ತಾಲ್ಲೂಕಿನ ಚುರ್ಚಿಹಾಳ, ಹಾರೋಗೇರಿ, ನರಗುಂದ ತಾಲ್ಲೂಕಿನ ಸೋಮಾಪುರ, ಕೊಣ್ಣೂರ, ಸುರಕೋಡ.

ರೋಣ ಪಟ್ಟಣದ ವೀರಾಪುರ ಓಣಿ, ವಿವೇಕಾನಂದ ನಗರ, ರೋಣ ತಾಲ್ಲೂಕಿನ ಅಬ್ಬಿಗೇರಿ, ನರೇಗಲ್, ಇಟಗಿ, ಯಾವಗಲ್, ಸವಡಿ, ಶಿರಹಟ್ಟಿ ತಾಲ್ಲೂಕಿನ ಹರಿಪುರ, ಬನ್ನಿಕೊಪ್ಪ, ಲಕ್ಷ್ಮೇಶ್ವರ, ಶಿಗ್ಲಿಯಲ್ಲಿ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು