ಫುಟ್‌ಬಾಲ್‌ ಚಾಂಪಿಯನ್‌ಶಿಪ್: ರಾಷ್ಟ್ರಮಟ್ಟಕ್ಕೆ 48 ಕ್ರೀಡಾಪಟುಗಳು ಆಯ್ಕೆ

7
ವಿದ್ಯಾರ್ಥಿ ಒಲಿಪಿಂಕ್‌ ಕ್ರೀಡಾಕೂಟ

ಫುಟ್‌ಬಾಲ್‌ ಚಾಂಪಿಯನ್‌ಶಿಪ್: ರಾಷ್ಟ್ರಮಟ್ಟಕ್ಕೆ 48 ಕ್ರೀಡಾಪಟುಗಳು ಆಯ್ಕೆ

Published:
Updated:
Deccan Herald

ಗದಗ: ಸ್ಟೂಡೆಂಟ್ ಒಲಿಂಪಿಕ್ ಅಸೋಸಿಯೇಷನ್ ಆಫ್‌ ಕರ್ನಾಟಕ ವತಿಯಿಂದ ಐದನೇ ವಿದ್ಯಾರ್ಥಿ ಒಲಿಪಿಂಕ್‌ ಕ್ರೀಡಾಕೂಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್ ಮತ್ತು ತಂಡಗಳ ಆಯ್ಕೆ ಪ್ರಕ್ರಿಯೆ ಇಲ್ಲಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.

ಶನಿವಾರ ನಡೆದ 14, 17 ಮತ್ತು 19 ವರ್ಷದೊಳಗಿನ ವಿಭಾಗದಲ್ಲಿ ಮೂರು ತಂಡಗಳನ್ನು ಆಯ್ಕೆ ಮಾಡಲಾಯಿತು. ಒಟ್ಟು 48 ಕ್ರೀಡಾಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಂದು ವಿಭಾಗದಲ್ಲಿ 16 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಬೆಳಿಗ್ಗೆ 11ಕ್ಕೆ ಆರಂಭವಾದ ಆಯ್ಕೆ ಪ್ರಕ್ರಿಯೆ ಸಂಜೆ 5 ಗಂಟೆ ವರೆಗೆ ನಡೆಯಿತು.

ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ, ದಾವಣಗೆರೆ, ಬೆಂಗಳೂರು, ಮಂಗಳೂರು, ಶಿವಮೊಗ್ಗ ಸೇರಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಿಂದ 120ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಸ್ಯ ಎಂ.ಸಿ.ಶೇಖ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ, ಸರ್ಫರಾಜ್ ಶೇಖ, ಗದಗ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸ್ಯಾಮಸನ್, ಅಂತರರಾಷ್ಟ್ರೀಯ ಕ್ರೀಡಾಪಟು ಡಿ.ಬಿ.ನಾಗರಾಜ ಇದ್ದರು.

ಕ್ರೀಡಾಪಟುಗಳ ಆಯ್ಕೆ ಪಾರದರ್ಶಕ

‘ರಾಷ್ಟ್ರ ಮಟ್ಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ಗಾಗಿ ಒಟ್ಟು 80 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುವುದು. ಶನಿವಾರ ನಡೆದ 14, 17 ಮತ್ತು 19 ವರ್ಷದೊಳನ ವಿಭಾಗಗಳ ಆಯ್ಕೆ ಪ್ರಕ್ರಿಯೆಯಲ್ಲಿ 48 (ಮೂರು ತಂಡಗಳು) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಭಾನುವಾರ (ಸೆ.16) 22 ಮತ್ತು 25 ವರ್ಷದೊಳಗಿನ ಫುಟ್‌ಬಾಲ್‌ ತಂಡಕ್ಕೆ 32 (ಎರಡು ತಂಡಗಳು) ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುವುದು.

‘ಪ್ರತಿಯೊಂದು ವಿಭಾಗದಲ್ಲಿ ಎರಡು ತಂಡಗಳನ್ನು ರಚಿಸಿ, ಕ್ರೀಡಾಪಟುಗಳ ಆಟದ ವೈಖರಿ, ಸಾಮರ್ಥ್ಯ, ಉತ್ತಮ ಪ್ರದರ್ಶನದ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ಮಣಿಪುರದ ಇಂಪಾಲ್‌ನಲ್ಲಿ ಡಿಸೆಂಬರ್‌ ಅಂತ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ’ ಎಂದು ಸ್ಟೂಡೆಂಟ್ ಒಲಿಂಪಿಕ್ ಅಸೋಸಿಯೇಷನ್ ಆಫ್‌ ಕರ್ನಾಟಕ ಕಾರ್ಯದರ್ಶಿ ಮಹಮ್ಮದ್‌ ಅಲಿ, ಧಾರವಾಡ ವಿಭಾಗದ ಕಾರ್ಯದರ್ಶಿ ಇರ್ಷಾದ್ ಎಂ ತಿಳಿಸಿದರು.

* ಕಳೆದ ಬಾರಿ ನಡೆದ ರಾಷ್ಟ್ರ ಮಟ್ಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ಗಾಗಿ ನಡೆದ ಆಯ್ಕೆ ಪ್ರಕ್ರಿಯೆಯ ಐದೂ ವಿಭಾಗಳಲ್ಲಿ 168 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಬಾರಿ 300ಕ್ಕೂ ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ
–ಮಹಮ್ಮದ್‌ ಅಲಿ, ಕಾರ್ಯದರ್ಶಿ, ಸ್ಟೂಡೆಂಟ್ ಒಲಿಂಪಿಕ್ ಅಸೋಸಿಯೇಷನ್ ಆಫ್‌ ಕರ್ನಾಟಕ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !