ಸೋಮವಾರ, ಅಕ್ಟೋಬರ್ 3, 2022
21 °C

ಅಬ್ಬಿಕೆರೆ ಕೋಡಿ ಹರಿದು, ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ (ಗದಗ ಜಿಲ್ಲೆ): ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ರಾತ್ರಿ  ಮೂರು ತಾಸಿಗೂ ಹೆಚ್ಚು ಕಾಲ ರಭಸದ ಮಳೆ ಸುರಿತು. 
         ಮಳೆ ಪರಿಣಾಮ ಅಬ್ಬಿ ಕೆರೆ ತುಂಬಿ ಕೋಡಿ ಹರಿದಿದ್ದು, ಸಂಗನಪೇಟೆ ಓಣಿಯ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಹುಸೇನಸಾಬ ದೊಡ್ಡಮನಿ ಅವರ ಮನೆ   ಗೋಡೆ ಕುಸಿದು ಬಿದ್ದಿದೆ. ರಾತ್ರಿ ಸುರಿದ ಮಳೆಯಿಂದ ಕೆರೆ ನೀರು ಹರಿಯುವ ಪ್ರಮಾಣ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದವಸ ಧಾನ್ಯ, ನೀರು ಪಾಲಾಗಿದೆ.  ಸಾಮಾನು ಸರಂಜಾಮು,  ಶಾಲೆ ಮಕ್ಕಳ ಪುಸ್ತಕ ನೀರಲ್ಲಿ ತೇಲಿವೆ. ಮನೆಯಲ್ಲಿ ಶೇಕರಿಸಿಟ್ಟಿದ್ದ ರಾಸಾಯನಿಕ ಗೊಬ್ಬರ ಕರಗಿದೆ, ರಾತ್ರಿಯಿಡಿ ನೀರು ಹೊರ ಹಾಕಲು ಜನ ಪರದಾಡಿದರು. 
       ರಾತ್ರಿ   ಸ್ಥಳಿರು ಜೆಸಿಬಿ ಬಳಸಿ ರಸ್ತೆ ಅಗೆದು ಕೆರೆ ಕೋಡಿ ನೀರು ಹರಿಯಲು ದಾರಿ ಮಾಡಿದ್ದಾರೆ.    ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಗ್ರಾಮಲೆಕ್ಕಾಧಿಕಾರಿ ಶ್ರೀಧರ ಪಟ್ಟೇದ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.