ನರೇಗಲ್: ‘ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಲಿಂ. ಅಭಿನವ ಅನ್ನದಾನ ಸ್ವಾಮೀಜಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ’ ಎಂದು ಹಿರಿಯ ವೈದ್ಯ ಜಿ.ಕೆ. ಕಾಳೆ ಹೇಳಿದರು.

ನರೇಗಲ್ ಪಟ್ಟಣದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶಾಲಾ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

‘ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಮೂಲಸೌಕರ್ಯ, ವಿದ್ಯಾರ್ಥಿಗಳ ಪ್ರಗತಿ, ಶಿಕ್ಷಕರ ಬೇಡಿಕೆ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಸ್ವಾಮೀಜಿಗಳು ಒತ್ತು ಕೊಡುತ್ತಿದ್ದರು. ಎಲ್ಲರೂ ಉತ್ತಮ ಶಿಕ್ಷಣ ಪಡೆದು ಶಾಲೆಗೆ ಹೆಸರು ತರುತ್ತಿದ್ದಾರೆ’ ಎಂದರು.

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ‘ಶ್ರೀಗಳ ದೂರದೃಷ್ಟಿಯಿಂದ ನರೇಗಲ್ ಪಟ್ಟಣವು ಜಿಲ್ಲೆಯ ಶೈಕ್ಷಣಿಕ ಕಾಶಿ ಎಂದು ಹೆಸರು ಪಡೆದಿದ್ದು, ಅದನ್ನು ಹಾಗೆಯೇ ಕಾಪಾಡಿಕೊಂಡು ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜವಾಬ್ದಾರಿ ಎಲ್ಲರ ಹೊಣೆ’ ಎಂದರು.

ಶಾಲೆಯ ಆಡಳಿತ ಮಂಡಳಿ ಚೇರ್ಮನ್ ಜಿ.ಕೆ. ಕಾಳೆ, ಬಸವರಾಜ ಕಳಕಣ್ಣವರ, ವಿ.ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ಸೀತಾ ಕುಲಕರ್ಣಿ, ವಿ.ಎಸ್. ಜಾಧವ್, ಎಸ್.ಎಚ್. ಮಾನ್ವಿ, ಗೀತಾ ಶಿಂಧೆ, ಎಂ.ವಿ. ಕಡೆತೋಟದ, ಪೂರ್ಣಿಮಾ ಅಂಗಡಿ, ಎಂ.ಎಂ. ಸಿಳ್ಳಿನ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.