ಶನಿವಾರ, ನವೆಂಬರ್ 23, 2019
17 °C

ಅಪಘಾತ: ಗಾಯಾಳುಗಳಿಗೆ ತಕ್ಷಣ ಆಸ್ಪತ್ರೆ ಗೆ ಕಳುಹಿಸಿದ ಸಚಿವ ಸಿ.ಸಿ.ಪಾಟೀಲ

Published:
Updated:

ಗದಗ:  ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದವರನ್ನು ಕಂಡು ಸಚಿವ ಸಿ.ಸಿ. ಪಾಟೀಲ, ಆಸ್ಪತ್ರೆಗೆ ದಾಖಲಿಸಿ‌ ಮಾನವೀಯತೆ ಮೆರದಿದ್ದಾರೆ.

ಗದಗ -ಹುಬ್ಬಳ್ಳಿ ರಸ್ತೆಯಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ಮಹಿಳೆಗೆ ಗಂಭೀರ ಗಾಯವಾಗಿ ನರಳುತ್ತಾ ಬಿದ್ದಿದ್ದರು.

ಸಚಿವ ಸಿ.ಸಿ. ಪಾಟೀಲ್ ಗದಗ ತಾಲ್ಲೂಕಿನ ಲಿಂಗದಾಳ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇದೇ ಮಾರ್ಗವಾಗಿ  ತೆರಳುತ್ತಿದ್ದರು. ಅಪಘಾತ ನೋಡಿ ವಾಹನ ನಿಲ್ಲಿಸಿದ ಸಚಿವರು,  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು.

ಇನ್ನು ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟಂ ಟಂ ಸವಾರರು ಹುಲಕೋಟಿ ಹಾಗೂ ಕುರ್ತಕೋಟಿ ಗ್ರಾಮದವರಾಗಿದ್ದು, ಗದಗನಿಂದ ಹುಲಕೋಟಿ ಕಡೆ ಹೋಗುವ ವೇಳೆ ಈ ಅವಘಡ ಸಂಭವಿಸಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)