ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಲಹೆ

Published 8 ನವೆಂಬರ್ 2023, 12:48 IST
Last Updated 8 ನವೆಂಬರ್ 2023, 12:48 IST
ಅಕ್ಷರ ಗಾತ್ರ

ಮುಂಡರಗಿ: ‘ವಿಜ್ಞಾನ ಹಾಗೂ ತಂತ್ರಜ್ಞಾನಗಳು ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ. ತಂತ್ರಜ್ಞಾನವನ್ನು ಮನುಕುಲದ ಉದ್ದಾರಕ್ಕಾಗಿ ಬಳಸಬೇಕಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಿಳಿಸಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳು ಕಠಿಣವೆನಿಸುತ್ತಿವೆ. ಅವು ಸುಲಭ ವಿಷಯಗಳಾಗಿದ್ದು, ಗಮನವಿಟ್ಟು ಪಾಠ ಆಲಿಸಿದರೆ ಅವುಗಳಲ್ಲಿ ಆಸಕ್ತಿ ಮೂಡುತ್ತದೆ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ಮಕ್ಕಳ ಮನ ಮುಟ್ಟುವಂತೆ ಪಾಠ ಮಾಡಬೇಕು’ ಎಂದು ತಿಳಿಸಿದರು.

ಭುವನೇಶ್ವರ ವಿದ್ಯಾ ಸಮಿತಿಯ ಮುಖಂಡ ಎ.ವೈ.ನವಲಗುಂದ ಮಾತನಾಡಿ, ‘21ನೇ ಶತಮಾನದಲ್ಲೂ ಕೆಲವರು ಮೌಢ್ಯ ಹಾಗೂ ಕಂದಾಚಾರಗಳಲ್ಲಿ ನಂಬಿಕೆ ಇಟ್ಟಿರುವುದು ವಿಷಾದನೀಯ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮೂಡ ನಂಬಿಕೆ ಹಾಗೂ ಕಂದಾಚಾರಗಳಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

ವಿದ್ಯಾ ಸಮಿತಿಯ ಅಧ್ಯಕ್ಷ ಸಿ.ಬಿ.ಚನ್ನಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸದಸ್ಯರಾದ ಬಿ.ವಿ.ಮುದ್ದಿ, ಶಿಕ್ಷಣ ಇಲಾಖೆಯ ಚಿದಾನಂದ ವಡ್ಡರ, ಹನುಮರಡ್ಡಿ ಇಟಗಿ ಮಾತನಾಡಿದರು.

ಮುಖ್ಯ ಶಿಕ್ಷಕ ಮಂಜುನಾಥ ತೆಗ್ಗಿನಮನಿ, ಆರ್.ವಿ.ಅರ್ಕಸಾಲಿ, ಎಂ.ಟಿ.ಮಾಳಾಪೂರ ಆನಂದಗೌಡ ಕುಲಕರ್ಣಿ ಇದ್ದರು.

ವಿಜೇತರ ವಿವರ: ವೈಯಕ್ತಿಕ ವಿಭಾಗದಲ್ಲಿ ಹಾರೋಗೇರಿ ಶಾಲೆಯ ಗಣೇಶ ಭಜಮ್ಮನವರ ಪ್ರಥಮ, ಹೆಸರೂರು ಶಾಲೆಯ ಮಲ್ಲಯ್ಯ ಸಸಿಮಠ ದ್ವಿತೀಯ, ವೆಂಕಟಾಪೂರ ಶಾಲೆಯ ಅಭಿಷೇಕ ಸಣ್ಣದ್ಯಾವಣ್ಣವರ ತೃತೀಯ ಸ್ಥಾನ ಪಡೆದುಕೊಂಡರು.

ಗುಂಪು ವಿಭಾಗದಲ್ಲಿ ಯಕ್ಲಕಾಸಪುರ ಸರ್ಕಾರಿ ಶಾಲೆ ಪ್ರಥಮ, ಜೆ.ಟಿ.ಕೋಟೆ ಶಾಲೆ ದ್ವಿತೀಯ ಹಾಗೂ ಕದಾಂಪೂರ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT