ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್ ಸರ್ವಜನಾಂಗದ ಶಕ್ತಿ’

Last Updated 27 ಸೆಪ್ಟೆಂಬರ್ 2020, 2:43 IST
ಅಕ್ಷರ ಗಾತ್ರ

ಡಂಬಳ: ಡಾ.ಬಿ.ಆರ್ ಅಂಬೇಡ್ಕರ್ ಜೀವನದ ಸಾಧನೆಗಳು ಅವರು ಅನುಭವಿಸಿದ ಕಷ್ಟಗಳನ್ನು ಕೇವಲ ವಿದ್ಯಾವಂತರು ಪಠ್ಯಪುಸ್ತಕದಲ್ಲಿ ಮಾತ್ರ ಓದುತ್ತಿದ್ದರು. ಆದರೆ ಜೀ ಕನ್ನಡ ವಾಹಿನಿ ಅಂಬೇಡ್ಕರ್ ಅವರ ಜೀವನ ಆಧಾರಿತ ಮಹಾನಾಯಕ ಧಾರವಾಹಿ ಪ್ರಸಾರ ಮಾಡುತ್ತಿರುವುದರಿಂದ ಅನಕ್ಷರಸ್ಥರು ಸೇರಿದಂತೆ ಎಲ್ಲ ವರ್ಗದವರು ಅವರ ಬದುಕಿನ ವಿಚಾರ ಧಾರೆಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ ಎಂದು ಯುವ ಮುಖಂಡ ಪರಶುರಾಮ ಉಡಚಪ್ಪ ಹರಿಜನ ಅಭಿಪ್ರಾಯಪಟ್ಟರು.

ಡಂಬಳ ಹೋಬಳಿ ಕದಾಂಪೂರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಕಾಲೊನಿಯ ನಿವಾಸಿಗಳು ಮಹಾನಾಯಕ ಬ್ಯಾನರ್ ಹಾಕುವ ಮೂಲಕ ವಾಹಿನಿಯನ್ನು ಅಭಿನಂದಿಸಿದರು. ಮಹಾನಾಯಕ ಧಾರವಾಹಿ ಪ್ರತಿಯೊಂದು ಮನೆ ಮಾತಾಗಿದೆ. ಅಂಬೇಡ್ಕರ್ ಅವರ ಉದಾತ್ತ ವಿಚಾರಧಾರೆಗಳು, ತತ್ವ ಆದರ್ಶಗಳು,ಅವರ ಜೀವನದ ಮೌಲ್ಯಗಳನ್ನು ಧಾರವಾಹಿ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.

ದೌರ್ಜನ್ಯ, ಶೋಷಿತ ಸಮುದಾಯ ಶಿಕ್ಷಣ ಕಲಿಯಲು ಅನುಭವಿಸಿದ ಕಷ್ಟಗಳು, ಜಾತಿಯ ವ್ಯವಸ್ಥೆಯನ್ನು ಧಾರವಾಹಿ ಮೂಲಕ ತಿಳಿದುಕೊಳ್ಳಲು ಸಾಧ್ಯಾವಾಗಿದೆ. ಪ್ರತಿಯೊಬ್ಬರು ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಮಾಜದ ಮುಖಂಡರಾದ ರುದ್ರಪ್ಪ ಹರಿಜನ, ಮಾರುತೆಪ್ಪ ಹರಿಜನ, ಶಿವಲಿಂಗಪ್ಪ ಹರಿಜನ, ಶರಣಪ್ಪ ಹೊಸಮನಿ, ಮಾಲಿಂಗಪ್ಪ ಹೊಸಮನಿ, ಪರಸಪ್ಪ ಯಲ್ಲಪ್ಪ ಹರಿಜನ, ಮಲ್ಲಪ್ಪ ಹೊಸಮನಿ, ಮಂಜಪ್ಪ ಹರಿಜನ, ಶಿವಾನಂದ ವೀರಾಪೂರ, ರಂಜಿತ ಹರಿಜನ, ಯಲ್ಲಪ್ಪ ಹೊಸಮನಿ, ಯಲ್ಲಪ್ಪ ಹಳ್ಳಿಗುಡಿ, ಕಾಶಪ್ಪ ಹರಿಜನ, ಹರೀಶ ಹರಿಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT