ಅಣ್ಣಿಗೇರಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಸರ್ಕಾರದ ರಿಯಾಯಿತಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಮುಂಗಾರು ಹಂಗಾಮಿನಲ್ಲಿ ಬೇಕಾಗುವ ಬಿತ್ತನೆ ಬೀಜಗಳು ಕೊರತೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡು ದಾಸ್ತಾನು ಮಾಡಿಕೊಂಡಿದೆ. ರೈತರು ಬೀಜಕ್ಕಾಗಿ ಆತಂಕ ಪಡಬೇಕಾಗಿಲ್ಲ’ ಎಂದರು.

‘ಮೊದಲ ಹಂತದಲ್ಲಿ ಹೆಸರು, ಉದ್ದು ವಿತರಣೆ ಮಾಡಲಾಗುತ್ತಿದೆ. ನಂತರ ಶೇಂಗಾ, ತೊಗರಿ, ಮೆಕ್ಕೆಜೋಳ ಮುಂತಾದ ಬೀಜಗಳನ್ನು ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಈರಣ್ಣ ಗಡಾದ, ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಕೃಷಿಕ ಸಮಾಜ ತಾಲೂಕು ಘಟಕ ಅಧ್ಯಕ್ಷ ಎ.ಪಿ.ಗುರಿಕಾರ, ಸದಸ್ಯರಾದ ಸಿದ್ದಲಿಂಗಪ್ಪ ಗೂರಗೇರಿ, ಮಲ್ಲಪ್ಪ ಹಾಳದೋಟರ, ಹನಮಂತಪ್ಪ ಕಂಬಳಿ, ಶಂಭು ಅಜ್ಜಿ, ಪುರದಪ್ಪ ಹವಾಲ್ದಾರ, ಬಡ್ಡಾ ಬೆಟಗೇರಿ, ನಾಗಲಿಂಗಪ್ಪ ದಳವಾಯಿ ಸೇರಿದಂತೆ ಮೊದಲಾದ ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-774554453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.