ಮುಂಡರಗಿ: 'ಮುಂಬರುವ ದಿನಗಳಲ್ಲಿ ಜಗತ್ತು ಸಂಪೂರ್ಣವಾಗಿ ಕೃತಕ ಬುದ್ದಿಮತ್ತೆಯನ್ನು ಅವಲಂಬಿಸಲಿದ್ದು, ಆಯ್ದ ಕ್ಷೇತ್ರಗಳಲ್ಲಿ ಉದ್ಯೋನಷ್ಟವಾಗುವ ಸಾಧ್ಯತೆಯಿದೆ. ಕೃತಕ ಬುದ್ದಿಮತ್ತೆಗೆ ಹೃದಯ ಮತ್ತು ಭಾವನೆಗಳಿಲ್ಲದ್ದರಿಂದ ಅದು ಮನುಷ್ಯನಂತೆ ಪ್ರೀತಿ ಮತ್ತು ಗೌರವದಿಂದ ಕೆಲಸ ಕಾರ್ಯಗಳನ್ನು ಮಾಡಲಾರದು' ಎಂದು ಅನ್ನದಾನೀಶ್ವರ ಮಹಾಸ್ವಾಮಿಜಿ ತಿಳಿಸಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳು ಯುವಕ, ಯುವತಿಯರಿಗೆ ಸವಾಲಿನ ದಿನಗಳಾ ಗಿದ್ದು, ಎಲ್ಲವನ್ನು ಎದುರಿಸಲು ಯುವಕರು ಸಿದ್ಧರಾಗಿರಬೇಕು. ಸಮಯ ವನ್ನು ವ್ಯರ್ಥಮಾಡದೆ ನಿರಂತರ ಅಧ್ಯ ಯನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಆಡಳಿತಾಧಿಕಾರಿ ಬಿ.ಜಿ.ಜವಳಿ ಮಾತನಾಡಿ, ಭಾಷಾ ಕಲಿಕೆಯಲ್ಲಿ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣದಿಂದ ಕೃತಕ ಬುದ್ದಿಮತ್ತೆಯು ಶೈಕ್ಷಣಿಕ ಕ್ಷೇತ್ರವನ್ನು ಆವರಿಸುವ ಸಾಧ್ಯತೆ ಕಡಿಮೆ. ಪ್ರಶಿಕ್ಷಣಾರ್ಥಿಗಳು ಭಯಪಡದೆ ತಮ್ಮ ಅದ್ಯಯನದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ನಾವೆಲ್ಲ ಇಂದು ಡಿಜಿಟಲ್ ಶಿಕ್ಷಣದ ಕಾಲಘಟ್ಟದಲ್ಲಿದ್ದು, ಎಲ್ಲವೂ ಕಂಪ್ಯೂಟರ್ ಹಾಗೂ ಮೊಬೈಲ್ ಮಯವಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯಗಳ ಜೊತೆಗೆ ಡಿಜಿಟಲ್ ತಂತ್ರಜ್ಞಾನದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಸಿ.ಎಸ್.ಅರಸನಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಹಂಚಿನಾಳ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಜ್ಜನಿ ರವಿಚಂದ್ರ ಹಾಗೂ ಪುಟ್ಟರಾಜ ಚಿಂಚಲಿ ಅವರನ್ನು ಸನ್ಮಾನಿಸಲಾ ಯಿತು. ಪ್ರಾಚಾರ್ಯ ಎಂ.ವಿ.ಕುಲಕರ್ಣಿ ಸ್ವಾಗತಿಸಿದರು. ನೀಲಪ್ಪ ನಿರೂಪಿಸಿದರು. ಮಂಜುನಾಥ ಕಲ್ಮನಿ ವಂದಿಸಿದರು. ಶೋಭಾ ಹೊನ್ನೂರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-23-1742184781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.