ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಿಂದ ಮನವಿ

Last Updated 22 ಸೆಪ್ಟೆಂಬರ್ 2020, 15:40 IST
ಅಕ್ಷರ ಗಾತ್ರ

ಗದಗ: 2020-21ನೇ ಸಾಲಿನ ರಾಜ್ಯ ಸರ್ಕಾರದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬೀದಿನಾಟಕ ಕಲಾ ತಂಡಗಳಿಗೆ ನೀಡುವಂತೆ ಒಕ್ಕೂಟದ ಅಧ್ಯಕ್ಷ ವೀರಣ್ಣ ಅಂಗಡಿಯವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

‘ಸರ್ಕಾರಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಏಳು ತಿಂಗಳಿಂದ ಇಲ್ಲದೇ ಇರುವುದರಿಂದ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರದಿಂದ ಪರಿಹಾರ ಕೂಡ ಸಿಕ್ಕಿಲ್ಲ. ಪ್ರಸ್ತಕ ಸಾಲಿನ ರಾಜ್ಯ ಸರ್ಕಾರದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಮ್ಮ ಕಲಾ ತಂಡಗಳಿಗೆ ನೀಡಬೇಕು’ ಎಂದು ಅವರು ಮನವಿಯಲ್ಲಿ ಒತ್ತಾಯಿಸಿದರು.

ಕಾರ್ಯದರ್ಶಿ ಪ್ರಕಾಶ ಚಂದಾನವರ, ಅನ್ನಪೂರ್ಣ ಎಸ್. ಹುಬ್ಬಳ್ಳಿ, ಕಲ್ಪನಾ ಹಿರೇಗೌಡರ, ಹನಮಂತ ದೊಡ್ಡಮನಿ, ವಿ.ವಿ.ಗೊರನವರ, ಬಿ.ಎಚ್.ವಾಸನ, ಎ.ಬಿ.ಮೇಟಿ, ಮಹೇಶ ಜಗ್ಗಲ, ಮಂಜುಳಾ ಕಲಕೇರಿ, ಪೂಜಾ ಬೇವೂರ, ರತ್ನಾ ಚಂಡೂರ, ಮೀನಾಕ್ಷಿ ದೇವರಡ್ಡಿ, ಶಿವಪ್ಪ ಗಿಡ್ಯಕನಾಳ, ಮೈಲಾರಪ್ಪ ಹರಿಜನ, ಮಲ್ಲನಗೌಡ, ನಿಂಗಪ್ಪ ಬಾರಕೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT