ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಲೈಫ್‌ ಸ್ಟೋರಿ ಸ್ಪರ್ಧೆಗೆ ಅಶ್ವಿನಿ

ಬಡತನದ ಬೆಂಕಿಯಲ್ಲಿ ಅರಳಿದ ಹೂ
Last Updated 15 ಅಕ್ಟೋಬರ್ 2020, 6:12 IST
ಅಕ್ಷರ ಗಾತ್ರ

ನರಗುಂದ: ತನ್ನ ಜೀವನ ಕಥೆಯನ್ನು ತಾನೇ ವಿಡಿಯೊ ಮಾಡುವ ಮೂಲಕ ಅಮೆರಿಕದ ಲೆನೊವೊ ಕಂಪನಿ ಆಯೋಜಿಸಿದ್ದ ‘ನ್ಯೂ ರಿಯಾಲಿಟಿಸ್ ಲೈಫ್ ಸ್ಟೋರಿ’ ಸ್ಪರ್ಧೆಗೆ ತಾಲ್ಲೂಕಿನ ಕುರಗೋವಿನಕೊಪ್ಪ ಗ್ರಾಮದ ಅಶ್ವಿನಿ ದೊಡ್ಡಲಿಂಗಪ್ಪನವರ ಆಯ್ಕೆಯಾಗಿದ್ದಾರೆ.

ರೈತಾಪಿ ಕುಟುಂಬದ ಹೆಣ್ಣು ಮಗಳಾದ ಅಶ್ವಿನಿ ಪದವಿ ನಂತರ, ಮನೆಯವರ ಅಸಮಾಧಾನದ ನಡುವೆಯೂ ಗೆಳತಿಯರ ಸಹಾಯದಿಂದ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನಲ್ಲಿ ಎರಡು ತಿಂಗಳ ಕೌಶಲ ಅಭಿವೃದ್ಧಿ ತರಬೇತಿ ಮುಗಿಸಿದರು. ಈಗ ಬೆಂಗಳೂರಿನ ಮೇಘ ಶಾಲಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಎಂಬುದರ ಕುರಿತು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.

ಗ್ರಾಮೀಣ ಯುವತಿಯರ ಶಿಕ್ಷಣದ ಕನಸು, ಭವಿಷ್ಯ ಹೇಗೆ ಕಮರಿ ಹೋಗುತ್ತದೆ. ಬಡತನ ಬೆಂಕಿಯಲ್ಲಿ ಹೇಗೆ ಅರಳಿ ಹೂವಾದೆ ಎಂಬುದನ್ನು ಅವರು ದೃಶ್ಯ ಸಹಿತ ವಿವರಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ತಮ್ಮ ಜೀವನ ಕಥೆಯನ್ನೆ ಬಿಂಬಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಮನೆಯವರು ಮದುವೆ ಮಾಡಲು ಮುಂದಾಗಿದ್ದುದು ಹಾಗೂ ಅದನ್ನು ನಿರಾಕರಿಸಿದ್ದನ್ನು ತೋರಿಸಿದ್ದರು.

ಅಶ್ವಿನಿ ಅವರ ಈ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.‘ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವ ಬಗ್ಗೆ ಪಾಲಕರು ಯೋಚನೆ ಮಾಡಬಾರದು. ಅವರಿಗೆ ಓದುವ ಅವಕಾಶ ಮಾಡಿಕೊಡಬೇಕು. ನನ್ನ ಹೆತ್ತವರು ಮದುವೆ ಮಾಡಲು ಮುಂದಾದಾಗ ಅವರ ಮನವೊಲಿಸಿ, ಪದವಿ ಶಿಕ್ಷಣ ಪೂರೈಸಿ ಸ್ವಾವಲಂಬಿಯಾದೆ’ ಎನ್ನುತ್ತಾರೆ ಅಶ್ವಿನಿ ದೊಡ್ಡಲಿಂಗಪ್ಪನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT