ಗದಗ: ನಗರದ ಆದರ್ಶ ಶಿಕ್ಷಣ ಸಮಿತಿಯ ಲಕ್ಷ್ಮಣರಾವ್ ಅನಂತರಾವ್ ಪೊತ್ನೀಸ್ ಮೆಮೋರಿಯಲ್ ಬಿಬಿಎ ಮತ್ತು ಬಿಸಿಎ ಕಾಲೇಜಿನ ಐಕ್ಯುಎಸಿ ಅಡಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಪ್ಯಾರಾ ಥ್ರೋಬಾಲ್ ಕ್ರೀಡಾಪಟು ಮಾಲತಿ ಇನಾಮತಿ ಮಾತನಾಡಿ, ‘ಮಹಿಳೆಯರು ಸ್ತ್ರೀ ಶಕ್ತಿ ಮತ್ತು ಪುರುಷ ಶಕ್ತಿ ಎರಡನ್ನು ಆಳವಡಿಸಿಕೊಳ್ಳಬೇಕು. ಸ್ತ್ರೀ ಶಕ್ತಿ ಪ್ರೀತಿ, ಕಾಳಜಿ ಮತ್ತು ಸಹನೆಯನ್ನು ಸೂಚಿಸಿದರೆ, ಪುರುಷ ಶಕ್ತಿ ಧೈರ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವವನ್ನು ಸೂಚಿಸುತ್ತದೆ’ ಎಂದರು.

‘ವಿದ್ಯಾರ್ಥಿನಿಯರು ಜೀವನ ಮತ್ತು ವೃತ್ತಿಯಲ್ಲಿ ಉತ್ತಮ ಯಶಸ್ಸು ಗಳಿಸಬೇಕು’ ಎಂದರು.

ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿನಿಯರಿಗೆ ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಪ್ರೊ. ಅಶ್ವಿನಿ ಹೊಸಮನಿ ಅತಿಥಿಗಳನ್ನು ಸನ್ಮಾನಿಸಿದರು. ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದ ಪ್ರೊ. ನೇತ್ರಾವತಿ ಹೂಗಾರ ಸ್ವಾಗತಿಸಿದರು. ಪ್ರೊ. ಪಾರ್ವತಿ ಹಳ್ಳೆಪ್ಪನವರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ರೇಣುಕಾ ಅಗಸನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪ್ರೇಮಾ ಹಲಗಿ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ಕಾವೇರಿ ಮಾಳಗಿಮನಿ ವಂದಿಸಿದರು.

ಈ ಕಾರ್ಯಕ್ರಮವನ್ನು ಬಿಬಿಎ ಮತ್ತು ಬಿಸಿಎ ಕಾಲೇಜಿನ ನಿರ್ದೇಶಕ ಎ.ಡಿ.ಗೊಡಖಿಂಡಿ, ಪ್ರಾಚಾರ್ಯರಾದ ಪ್ರೊ. ಲಿಂಗರಾಜ ರೇಶ್ಮಿ ಮಾರ್ಗದರ್ಶನದಲ್ಲಿ ಉಪನ್ಯಾಸಕರು ಸಂಘಟಿಸಿದರು. ಪ್ರೊ. ಏಂಜೆಲ್ ಗೋಕಾವಿ, ಪ್ರೊ. ಪ್ರಕೃತಿ ಸಿ.ಎಂ., ಪ್ರೊ ರಾಧಾ ಪಾಟೀಲ, ಕಚೇರಿ ಸಿಬ್ಬಂದಿ ಬನಶಂಕರಿ ಕುಲಕರ್ಣಿ, ಭವಾನಿ ವಾರಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.