ಶುಕ್ರವಾರ, ಡಿಸೆಂಬರ್ 2, 2022
19 °C

ಮಾಸಾಶನ ಕೊಡುವ ಬದಲು ಬೇರೆ ವ್ಯವಸ್ಥೆ ಕಲ್ಪಿಸಿ: ಡಾ. ಬಿ.ಟಿ. ಲಲಿತಾ ನಾಯಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಈಗ ಇರುವ ದೇವರುಗಳೆಲ್ಲರೂ ಮನುಷ್ಯರೇ. ಆದರೆ, ನಾವು ಅವರನ್ನೇ ದೇವರು ಅಂತ ಮಾಡಿಕೊಂಡಿದ್ದೇವೆ. ದೈವ ನರ್ತಕರಿಗೆ ಸರ್ಕಾರ ₹2 ಸಾವಿರ ಮಾಸಾಶನ ಕೊಡುವ ಬದಲು; ಅವರು ದುಡಿದು ತಿನ್ನುವಂತೆ ಮಾಡಬೇಕು’ ಎಂದು ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಡಾ. ಬಿ.ಟಿ.ಲಲಿತಾ ನಾಯಕ್‌ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೈವ ನರ್ತಕರು ದೇವರು ಅಂತ ಹೇಳಿ ₹2 ಸಾವಿರ ಕೊಡುವ ಬದಲು ಅವರು ಘನತೆಯಿಂದ ₹10ರಿಂದ ₹15 ಸಾವಿರ ದುಡಿಯುವಂತೆ ವ್ಯವಸ್ಥೆ ಮಾಡಬೇಕು. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ಅದು ಬಿಟ್ಟು, ದೇವರ ಹೆಸರು ಹೇಳಿ ಕುಣಿಯುವವರಿಗೆ ಸಾರ್ವಜನಿಕರ ತೆರಿಗೆ ಹಣ ಕೊಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಮಂಗಳಮುಖಿಯರು ಗಟ್ಟಿ ಮುಟ್ಟಾಗಿರುತ್ತಾರೆ. ಆದರೆ, ಕೆಲವರು ಅವರಿಗೆ ₹100 ಕೊಟ್ಟು, ₹1 ಅವರಿಂದ ಪಡೆದುಕೊಂಡು ಕಣ್ಣಿಗೆ ಒತ್ತಿಕೊಂಡು, ಜೇಬಿಗೆ ಇಟ್ಟುಕೊಳ್ಳುತ್ತಾರೆ. ಅವರು ದೇವರಿದ್ದಂತೆ, ಆಶೀರ್ವಾದ ಮಾಡುತ್ತಾರೆ ಎಂಬ ಮೂಢನಂಬಿಕೆ ಬಿತ್ತುತ್ತಿದ್ದಾರೆ. ಕೆಲವು ಗಂಡಸರು ಈಗ ಮಂಗಳಮುಖಿಯರ ವೇಷ ಧರಿಸಿ ದುಡ್ಡು ಕೀಳುತ್ತಿದ್ದಾರೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು