ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ

7

ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ

Published:
Updated:
Deccan Herald

ಗಜೇಂದ್ರಗಡ: ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಎಸ್.ಎಫ್.ಐ ಕಾರ್ಯಕರ್ತರು ಶನಿವಾರ ಪಟ್ಟಣದ ಕೆ.ಕೆ.ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಸಂಚರಿಸಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿದರು.

‘ಇತ್ತಿಚೆಗೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ಹೆಚ್ಚಿದ್ದು, ಇಂಥ ಕೃತ್ಯಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಶಾಲೆ– ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು ಎಂದು ಸುಪ್ರಿಂ ಕೋರ್ಟ್‌ನ ನಿರ್ದೇಶನವಿದ್ದರೂ ಸಹ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ಪೈಶಾಚಿಕ ಕೃತ್ಯವೆಸಗಿದ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ಅಶೋಕ ಉಕ್ಕಿಸಲ, ಮಹಾಂತೇಶ ಹಡಪದ, ವೀರೇಶ ರಾಠೋಡ, ಪೂಜಾ ಹಂಚಾಟೆ, ಶಶಿಕಲಾ ನಾಯಕ, ಭೀಮಪ್ಪ ಚವ್ಹಾಣ, ರವಿಕುಮಾರ ಹಾದಿಮನಿ, ಚಂದ್ರು ರಾಠೋಡ, ಕಳಕವ್ವ ರಾಠೋಡ, ಅಂದಾನಪ್ಪ ಮೇಟಿಮಠ, ಷಣ್ಮುಖ ಚವ್ಹಾಣ, ಶಕುಂತಲಾ ಪೂಜಾರ, ಸಾವಿತ್ರಿ ರಾಠೋಡ, ಕಾವೇರಿ ದೊಡ್ಡಮನಿ, ವಿದ್ಯಾರ್ಥಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !