ಮುಂಡರಗಿ: ‘ಬಾದಾಮಿ ತಾಲ್ಲೂಕಿನ ಬನಶಂಕರಿಯಲ್ಲಿ ಮೇ 9, 10ರಂದು ರಾಜ್ಯ ಮಟ್ಟದ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 36ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಜಿಲ್ಲಾ ದೇವಾಂಗ ಸಮಾಜದ ಅದ್ಯಕ್ಷ ದಶರಥರಾಜು ಕೊಳ್ಳಿ ಹೇಳಿದರು.

ತಾಲ್ಲೂಕು ದೇವಾಂಗ ಸಮಾಜ, ಬನಶಂಕರಿ ದೇವಸ್ಥಾನ ಟ್ರಸ್ಟ್ ಹಾಗೂ ತಾಲ್ಲೂಕು ಕಸಾಪ ಘಟಕಗಳು ಗುರುವಾರ ರಾತ್ರಿ ಇಲ್ಲಿಯ ದೇವಾಂಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯನವರ ಜೀವನ ಸಾಧನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಜನರು ಅಸಂಘಟಿತರಾಗಿದ್ದು, ಮೊದಲು ನಾವೆಲ್ಲ ಸಂಘಟಿತರಾಗಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡಬೇಕು. ಸಮಾಜದ ಉತ್ತಮ ಪ್ರಜೆಗಳಾಗಿ ಬಾಳುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಉಪ ತಹಶೀಲ್ದಾರ್ ಎಸ್.ಎಸ್.ಬಿಚ್ಚಾಲಿ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, 12ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಜನಿಸಿದ ದೇವರ ದಾಸಿಮಯ್ಯ ಬಸವಾದಿ ಶರಣರಿಗೆ ವಚನ ಸಾಹಿತ್ಯವನ್ನು ಪರಿಚಯಿಸಿದನು ಎಂದರು.

ಉಮಾಪತಿ ಅಕ್ಕಸಾಲಿ ಅವರು ದೇವರ ದಾಸಿಮಯ್ಯನವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು. ಬನಶಂಕರಿ ದೇವಸ್ಥಾನ ಟ್ರಷ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಗುಬ್ಬಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಂಕ್ರಮ್ಮ ಹಡಗಲಿ ಮಾತನಾಡಿದರು.

ಅವಿನಾಶ ಗೋಟಕ್ಕಿಂಡಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಗುಗ್ಗರಿ ಕೊನೆಯಲ್ಲಿ ವಂದಿಸಿದರು.

ಚಂದ್ರಮತಿ ಗದ್ದಿ, ರಾಘವೇಂದ್ರ ಕೊಪ್ಪಳ, ನಾರಾಯಣಪ್ಪ ಗುಬ್ಬಿ, ನಾಗರಾಜ ಭೂತಾನವರ, ಕೃಷ್ಣಮೂರ್ತಿ ದೂತರ್ಗಾವಿ, ಶಂಕ್ರಪ್ಪ ಕುಳ್ಳಿ, ಸಂಗಮೇಶ ನಿಡಗುಂದಿ, ಬಸನಗೌಡ ಮುನ್ನೊಳ್ಳಿ, ಗ್ಯಾನಪ್ಪ ಗುಗ್ಗುರಿ, ಬಸವರಾಜ ಗೋದಿ, ಮಲ್ಲಪ್ಪ ದೊತ್ರಗಾವಿ, ಲೋಕಪ್ಪ ದೂತರಗಾವಿ, ಕೇಶಪ್ಪ ಹುಳ್ಳಿ, ಸಂಜೀವ್ ರಿತ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-23-665432423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.