ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ಬಸವ ಜಯಂತಿ ಆಚರಣೆ

ಬಸವೇಶ್ವರ ಹಾಗೂ ಶರಣರ ಭಾವಚಿತ್ರಗಳ ಮರವಣಿಗೆ
Last Updated 7 ಮೇ 2019, 13:46 IST
ಅಕ್ಷರ ಗಾತ್ರ

ಗದಗ: ಬಸವಣ್ಣನವರ 914ನೇ ಜಯಂತಿ ಅಂಗವಾಗಿ, ಬಸವ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ನಡೆದ ಬಸವೇಶ್ವರ ಹಾಗೂ ಶರಣರ ಭಾವಚಿತ್ರಗಳ ಮರವಣಿಗೆಗೆ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಮೆರವಣಿಗೆಯು ತೋಂಟದಾರ್ಯ ಮಠದಿಂದ ಆರಂಭಗೊಂಡು, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಬಸವೇಶ್ವರ ವೃತ್ತ, ಕೆ.ಎಚ್ ಪಾಟೀಲ ವೃತ್ತ, ಮಾಳಶೆಟ್ಟರ ವೃತ್ತ, ರೋಟರಿ ವೃತ್ತ, ಗಾಂಧೀಜಿ ವೃತ್ತದ ಮೂಲಕ ಮರಳಿ ಮಠಕ್ಕೆ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಮಜಲು, ನಂದಿಕೋಲ ಕುಣಿತ ಹಾಗೂ ವಿವಿಧ ವಾದ್ಯ ಮೇಳಗಳು ಭಾಗವಹಿಸಿ ಮೆರುಗು ತುಂಬಿದವು. ಶರಣರ ರೂಪಕಗಳನ್ನೊಳಗೊಂಡ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಿತು. ಬಸವ ಜಯ ಘೋಷ, ವಚನಗಳ ಘೋಷಣೆಗಳು ಮೊಳಗಿದವು.

ಲಿಂಗಾಯತ ಪ್ರಗತಿಶೀಲ ಸಂಘ, ತೋಂಟದಾರ್ಯ ಜಾತ್ರಾ ಸಮಿತಿ, ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ದಲಿತ ಸಂಘರ್ಷ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವಸೇನೆ, ಬಣಜಿಗರ ಸಂಘದ ಪದಾಧಿಕಾರಿಗಳು, ಬಸವ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆ ನಂತರ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ಕುರಿತು ಪ್ರೊ. ಎಸ್.ಎಸ್ ಹರ್ಲಾಪೂರ ಅವರು ಉಪನ್ಯಾಸ ನೀಡಿದರು. ರೇವಣಸಿದ್ಧಯ್ಯ ಮರಿದೇವರಮಠ ಅವರಿಂದ ವಚನ ಸಂಗೀತ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT