ಮುಂಡರಗಿ: ‘ದೇಶದ ಪ್ರತಿ ರಾಜ್ಯಗಳಲ್ಲಿರುವ ಪ್ರಾಮಾಣಿಕ ಕಾರ್ಯಕರ್ತರ ಅವಿರತ ಶ್ರಮ, ತ್ಯಾಗ ಮತ್ತು ಸಂಘಟನೆಯ ಕಾರಣದಿಂದ ಇಂದು ಭಾರತೀಯ ಜನತಾ ಪಕ್ಷವು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯು ಹೆಮ್ಮರವಾಗಿ ಬೆಳೆಯಲು ಅದರ ತಳಮಟ್ಟದ ಕಾರ್ಯಕರ್ತರು ಕಾರಣ’ ಎಂದು ಡಂಬಳ ಮಂಡಳದ ಬಿಜೆಪಿ ಅದ್ಯಕ್ಷ ಅಂದಪ್ಪ ಹಾರೂಗೇರಿ ಹೇಳಿದರು.

ತಾಲ್ಲೂಕಿನ ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ಕೊಟೇಶ ಸಿಂದೋಗಿ ಅವರ ಮನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸಂಘಟನೆ, ಸಮರ್ಪಣೆ, ಸಂಘರ್ಷ, ಸೇವೆ ಹಾಗೂ ತ್ಯಾಗ ಮೊದಲಾದ ಉದಾತ್ತ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಕ್ಷಕ್ಕೆ ಹಾಗೂ ದೇಶಕ್ಕೆ ಪ್ರಾಮಾಣಿಕವಾಗಿ ದುಡಿದವರನ್ನು ನಾವು ಸ್ಮರಿಸಬೇಕು. ಕೆಲವೇ ಜನರಿಂದ ಆರಂಭಗೊಂಡ ಪಕ್ಷವು ಇಂದು ಜಗತ್ತಿನಾದ್ಯಂತ ಹರಡಲು ಅವರ ಶ್ರಮವೇ ಕಾರಣ’ ಎಂದು ತಿಳಿಸಿದರು.

ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಕೃಷ್ಣಾ ಬಂಡಿ ಮಾತನಾಡಿ, ‘ಬಿಜೆಪಿಯ ತತ್ವಾದರ್ಶಗಳು ದೇಶದ ಎಲ್ಲ ವರ್ಗದ ಜನರ ಮನಗೆದ್ದಿವೆ. ದೇಶ ಮೊದಲು ಎನ್ನುವುದು ಬಿಜೆಪಿಯ ಆದ್ಯತೆಯಾಗಿದ್ದು, ಅದಕ್ಕೆ ಧಕ್ಕೆ ಬಾರದಂತೆ ಎಲ್ಲ ಕಾರ್ಯರ್ತರು ನಡೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಬಿಜೆಪಿಯು ಜಗತ್ತಿನಾದ್ಯಂತ ತುಂಬಾ ಬಲಿಷ್ಠವಾಗಿ ಬೆಳೆಯುತ್ತಲಿದೆ’ ಎಂದು ತಿಳಿಸಿದರು.

ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪುರಮಠ, ಮುಖಂಡರಾದ ಮೈಲಾರೆಪ್ಪ ನೋಟಗಾರ, ಗೋಪಾಲ ವಾಲಿಕಾರ, ದೇವಪ್ಪ ತಾಮ್ರಗುಂಡಿ, ರಾಜೇಶ ಅರಕಾಲ, ಪ್ರಕಾಶ ಕೋತಂಬ್ರಿ, ಪ್ರಭು ಕರಮುಡಿ, ಮುತ್ತು ಚಿನ್ನಪ್ಪಗೌಡ್ರ, ಪ್ರಭು ಕೊರ್ಲಹಳ್ಳಿ, ಮುತ್ತಣ್ಣ ಬಿಸನಳ್ಳಿ, ನಿಂಗಪ್ಪ ಮಡಿವಾಳರ ಉಪಸ್ಥಿತರಿದ್ದರು. ಮುಂಡರಗಿ ವರದಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.

ಬಿಜೆಪಿ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಕಾರ್ಯದರ್ಶಿ ಪ್ರಶಾಂತ ಗುಡದಪ್ಪನವರ, ಆನಂದಗೌಡ ಪಾಟೀಲ, ಕೆ.ವಿ.ಹಂಚಿನಾಳ, ನಾಗೇಶ ಹುಬ್ಬಳ್ಳಿ, ಕೆ.ಎಪ್.ಅಂಗಡಿ, ಮೈಲಾರೆಪ್ಪ ಕಲಕೇರಿ, ಶಿವನಗೌಡ್ರ ಗೌಡ್ರ, ಪವಿತ್ರಾ ಕಲ್ಲಕುಟಿಗರ, ಪುಷ್ಪಾ ಉಕ್ಕಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-23-1793889994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.