ಲಕ್ಷ್ಮೇಶ್ವರ : ‘ಎಲ್ಲ ಧರ್ಮಗಳು ಮನುಷ್ಯನ ಕಲ್ಯಾಣ ಬಯಸಿವೆ. ಯಾವುದೇ ಧರ್ಮದ ನಿಂದನೆ ಸರಿಯಲ್ಲ. ಯಾರಿಂದಲೂ ಯಾವ ಧರ್ಮವನ್ನು ನಾಶಪಡಿಸಲು ಆಗದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಬುಧವಾರ ತ್ರಿಕೋಟಿ ಶಿವಲಿಂಗ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸತ್ಯ ಮತ್ತು ನ್ಯಾಯವೇ ಧರ್ಮ. ಆದರೂ, ಧರ್ಮದ ಹೆಸರಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಧರ್ಮಮಾರ್ಗದಲ್ಲಿ ನಡೆಯುವವರು ಎಂದಿಗೂ ಸುಳ್ಳು ಹೇಳಲ್ಲ’ ಎಂದರು.
‘ಲೋಕ ಕಲ್ಯಾಣ, ಸ್ವಾರ್ಥ ಮತ್ತು ಚಟಕ್ಕೆ ಸುಳ್ಳು ಹೇಳುವವರು ನಮ್ಮ ನಡುವೆ ಇದ್ದಾರೆ. ದೇವರ ಮೇಲೆ ಆಣೆ, ಪ್ರಮಾಣ ಮಾಡುವವರೂ ಹುಟ್ಟಿಕೊಂಡಿದ್ದಾರೆ. ಅಷ್ಟೇ ಏಕೆ, ನೊಣವಿನಕೆರೆ ಸ್ವಾಮೀಜಿ ಮೇಲೆಯೂ ಆಣೆ ಮಾಡುವವರು ಇದ್ದಾರೆ’ ಎಂದು ವೇದಿಕೆಯಲ್ಲಿದ್ದ ಶ್ರೀಗಳತ್ತ ನೋಡಿ ಹೇಳಿದಾಗ, ಸ್ವಾಮೀಜಿ ಮುಗುಳ್ನಕ್ಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.