ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನ ಸನ್ನಿವೇಶ ಮೀರಿ ನಿಲ್ಲುವ ಶಕ್ತಿ ಬಿಎಸ್‌ವೈಗೆ ಇದೆ

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ
Last Updated 15 ಫೆಬ್ರುವರಿ 2021, 6:15 IST
ಅಕ್ಷರ ಗಾತ್ರ

ಗದಗ: ‘ಹೋರಾಟದ ಹಿನ್ನಲೆಯಿಂದ ಬಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎಲ್ಲ ಬಗೆಯ ಇಕ್ಕಟ್ಟಿನ ಸನ್ನಿವೇಶ ಗಳನ್ನು ಮೆಟ್ಟಿ ಮೇಲೆ ಬರುವ ಶಕ್ತಿ ಇದೆ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.‍ಪಾಟೀಲ ಹೇಳಿದರು.

ಭಾನುವಾರ ಗದುಗಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ಸಂಬಂಧ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆದು ಅಧ್ಯಯಿ
ಸಲು ಸೂಚಿಸಿದ್ದಾರೆ. ಸಚಿವ ಮುರುಗೇಶ ನಿರಾಣಿ, ನಾನು ಎರಡು ಮೂರು ಬಾರಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿಯ ಅಭಿಪ್ರಾಯವನ್ನು ತಿಳಿಸಿದ್ದೇವೆ.ಯಾವುದೇ ಸರ್ಕಾರಕ್ಕಾದರೂಇಂತಹ ಸಮಸ್ಯೆಗಳನ್ನು ಬಗೆಹರಿ
ಸಲು ಸಮಯ ಬೇಕು’ ಎಂದರು.

‘ಸರ್ಕಾರ ಮೀಸಲಾತಿ ನೀಡಲು ಕಾನೂನಾತ್ಮಕ ಬಿಕ್ಕಟ್ಟುಗಳೂ ಇರುತ್ತವೆ. ಆ ಪ್ರಕಾರ ಮುಖ್ಯಮಂತ್ರಿ ಕೆಲಸ ಮಾಡುತ್ತಿದ್ದಾರೆ. ದಿಢೀರ್‌ ಘೋಷಿಸಿ, ನಂತರ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಅದು ವಿಫಲವಾಗುತ್ತದೆ’ ಎಂದು ಹೇಳಿದರು.

‘ವಿಜಯೇಂದ್ರ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ ಎಂಬುದು ಸುಳ್ಳು. ವಿಜಯಾನಂದ ಕಾಶಪ್ಪನವರ್‌ ಅವರಿಗಿಂತ ವಿಜಯೇಂದ್ರ ಅವರನ್ನು ನಾನು ಚೆನ್ನಾಗಿ ಬಲ್ಲೆ’ ಎಂದು
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT