ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಾಭಿಮಾನ ಮೂಡಿಸಲು ರಾಣಿ ಚನ್ನಮ ನಾಟಕ ಪ್ರದರ್ಶನ : ಸಚಿವ ಪಾಟೀಲ

Last Updated 14 ಮಾರ್ಚ್ 2023, 4:24 IST
ಅಕ್ಷರ ಗಾತ್ರ

ನರಗುಂದ: 1857ರ ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ಬ್ರಿಟೀಷರ ವಿರುದ್ಧ ಚೆನ್ನಮ್ಮ ಹೋರಾಟ ಮಾಡಿದ್ದಾಳೆ. ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಹೋರಾಡಿದ ಪ್ರಥಮ ಮಹಿಳೆ. .ಇವರ ಹೋರಾಟದ ಜೊತೆಗೆ ನಾಡಿನ ಇತಿಹಾಸ, ಚರಿತ್ರೆ, ಪರಂಪರೆ ಮತ್ತು ದೇಶಾಭಿಮಾನ ಮೂಡಿಸಲು ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ ಹೇಳಿದರು.

ಪಟ್ಟಣದ ರಾಣಿ ಚೆನ್ನಮ್ಮ ಮೈದಾನದಲ್ಲಿ ಭಾನುವಾರ ರಾತ್ರಿ ಸಿ ಸಿ ಪಾಟೀಲ ಅಭಿಮಾನಿ ಬಳಗದಿಂದ ಧಾರವಾಡದ ರಂಗಾಯಣ ಕಲಾವಿದರು ಪ್ರದರ್ಶಿಸುತ್ತಿರುವ ವೀರರಾಣಿ ಕಿತ್ತೂರ ಚೆನ್ನಮ್ಮ ನಾಟಕ ಪ್ರದರ್ಶನಕ್ಕೆ ಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಅವರು ಮುಂಬರುವ ದಿನಗಳಲ್ಲಿ ವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನದ ಸಿದ್ಧತೆ ನಡೆದಿದೆ. ರಾಣಿ ಚೆನ್ನಮ್ಮಳಂತೆ ಎಲ್ಲ ಮಹಿಳೆಯರು ಸ್ವಾಭಿಮಾನವುಳ್ಳವರಾಗಬೇಕು. ಬಾಬಾಸಾಹೇಬರ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚೆನ್ನಮ್ಮಳ ನಾಟಕವನ್ನು ನಿತ್ಯವೂ ಎಲ್ಲ ಜನತೆ ವೀಕ್ಷಣೆ ಮಾಡಬೇಕು. ಮಾ.14 ರಂದು ಕಿತ್ತೂರ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನ ನಿರ್ಮಾಣದ ಭೂಮಿಪೂಜೆ ನಡೆಯಲಿದೆ. ನಗರದಲ್ಲಿ ಸಕಲ ವಾದ್ಯಮೇಳದೊಂದಿಗೆ ಕುಂಭಮೇಳ ಮತ್ತು ಮೂರ್ತಿ ಮೆರವಣಿಗೆ ಜರುಗಲಿದೆ ಎಂದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ 33 ವರ್ಷ ಮೊದಲೇ ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿದ್ದಾಳೆ. ದೇಶದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಆಗಿದ್ದಾಳೆಂದು ಹೇಳಿದರು.

ರಂಗಾಯಣದ ನಿರ್ದೇಶಕ ರಮೇಶ ಪರ್ವಿನಾಯಕ ಮಾತನಾಡಿ ರಾಜ್ಯಾದ್ಯಂತ ಇಲ್ಲಿಯವರೆಗೆ 8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ನರಗುಂದದಲ್ಲಿ 20ನೇ ಪ್ರದರ್ಶನ ಆಗಿರುತ್ತದೆ. ರಾಜ್ಯ ಸರಕಾರದ ಪ್ರೋತ್ಸಾಹ ಬಹಳ ಇದೆ. 250 ಕಲಾವಿದರಿಂದ ಮತ್ತು ಸಜೀವ ಆನೆ, ಒಂಟೆ, ಕುದುರೆಗಳಿಂದ ರಾಣಿ ಚೆನ್ನಮ್ಮಳ ಗತವೈಭವವನ್ನು ಕಣ್ತುಂಬಿಕೊಂಡು ಪುನೀತರಾಗಬೇಕೆಂದು ಹೇಳಿದರು.

ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ಭಾಗದ ಜನರಿಗೆ ಉತ್ತಮ ಸಂಸ್ಕಾರ ಸಿಗಲೆಂದು ಈ ನಾಟಕ ನಡೆಯುತ್ತಿದೆ. ಹಣೆ ಮೇಲೆ ನೂರು ವರ್ಷದ ಆಯುಷ್ಯ ಇದ್ದರೂ. ಬೆನ್ನಹಿಂದೆ ನೋ ಗ್ಯಾರಂಟಿ ಎಂದು ಭಗವಂತ ಬರೆದಿದ್ದಾನೆ. ಆದ್ದರಿಂದ ನಾವು ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಸಮಾಜದ ಅಧ್ಯಕ್ಷ ಡಾ.ಸಿ ಕೆ ರಾಚನಗೌಡ್ರ, ಪಿ ಎಲ್ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಎಸ್ ಆರ್ ಹಿರೇಮಠ, ಎಸ್ ಡಿ ಕೊಳ್ಳಿಯವರ, ಎಮ್ ಎಸ್ ಕೊಳ್ಳಿಯವರ, ರಮೇಶಗೌಡ ಕರಕನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಅಜ್ಜಪ್ಪ ಹುಡೇದ, ಜಿ ಟಿ ಗುಡಿಸಾಗರ, ಎಸ್ ಜಿ ಮುತ್ತವಾಡ, ಉಮೇಶಗೌಡ ಪಾಟೀಲ, ಮುತ್ತನಗೌಡ ಪಾಟೀಲ, ಬಿ ಬಿ ಐನಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT