ಸುರೇಶ ಕಟ್ಟಿಮನಿ ನಗರಸಭೆ ಅಧ್ಯಕ್ಷ

7
ಬಿಜೆಪಿ ಬೆಂಬಲಿತ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಪ್ರಕಾಶ ಬಾಕಳೆಗೆ ಹಿನ್ನಡೆ

ಸುರೇಶ ಕಟ್ಟಿಮನಿ ನಗರಸಭೆ ಅಧ್ಯಕ್ಷ

Published:
Updated:
Deccan Herald

ಗದಗ: ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷರಾಗಿ 34ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಸುರೇಶ ಕಟ್ಟಿಮನಿ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಅವರು ಪ್ರತಿಸ್ಪರ್ಧಿ ಪ್ರಕಾಶ ಬಾಕಳೆ ವಿರುದ್ಧ 6 ಮತಗಳ ಅಂತರದಿಂದ ಗೆಲುವು ಪಡೆದರು.

ಬಾಕಳೆ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಚಲಾವಣೆಯಾದ 34 ಮತಗಳಲ್ಲಿ 20 ಮತಗಳು ಸುರೇಶ ಕಟ್ಟಿಮನಿ ಅವರಿಗೆ ಮತ್ತು 14 ಮತಗಳು ಬಾಕಳೆ ಅವರಿಗೆ ಲಭಿಸಿದವು. ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ 23 ಸದಸ್ಯರಿರುವ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸುತ್ತಿದೆ. (ಒಬ್ಬರು ಮೃತಪಟ್ಟಿದ್ದಾರೆ) ವಿರೋಧ ಪಕ್ಷವಾಗಿರುವ ಬಿಜೆಪಿಯ 11 ಸದಸ್ಯರಿದ್ದಾರೆ. ಇವರ ಜತೆಗೆ ಒಬ್ಬ ಸಂಸದ ಹಾಗೂ ಒಬ್ಬ ಶಾಸಕ ಸೇರಿ ಒಟ್ಟು 36 ಜನರು ಅಧ್ಯಕ್ಷ ಸ್ಥಾನದ ಆಯ್ಕೆಗೆ ಮತ ಚಲಾಯಿಸುವ ಅರ್ಹತೆ ಪಡೆದಿದ್ದರು.

ಸದಸ್ಯ ಬಲ ಕುಸಿಯಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌, ಸದಸ್ಯರಿಗೆ ವಿಪ್‌ ಜಾರಿಗೊಳಿಸಿತ್ತು. ನಗರಸಭೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಕಾಂಗ್ರೆಸ್‌ನ ಇಬ್ಬರು ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದರು.

ಈಗಿನ ನಗರಸಭೆ ಆಡಳಿತ ಅವಧಿ 2019ರ ಮಾರ್ಚ್ 10ಕ್ಕೆ ಮುಗಿಯಲಿದೆ. ಹೀಗಾಗಿ ಫೆಬ್ರುವರಿಯಲ್ಲೇ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕಟ್ಟಿಮನಿ 6 ತಿಂಗಳು ಮಾತ್ರ ಅಧ್ಯಕ್ಷ ಗಾದಿಯಲ್ಲಿ ಇರಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !