ರೋಣ (ಗದಗ ಜಿಲ್ಲೆ): ತಾಲ್ಲೂಕಿನ ಹೊಳೆಆಲೂರು ಭಾಗದ ಮಲಪ್ರಭೆ ತಟದಲ್ಲಿ ಫಿಲೋಸ್ಕೋಪಿಡೆ ಕುಟುಂಬಕ್ಕೆ ಸೇರಿದ ಕಾಮನ್ ಚಿಫ್ಚಾಫ್ ಹಕ್ಕಿ (ಕಂದು ಎಲೆ ಉಲಿಯಕ್ಕಿ) ಇದೇ ಮೊದಲ ಬಾರಿಗೆ ಕಂಡುಬಂದಿದೆ.

‘ಫಿಲೋಸ್ಕೋಪಸ್ ಕೊಲ್ಲಿಬಿಟಾ ಎಂಬ ಹೆಸರಿನಿಂದ ಗುರುತಿಸಲ್ಪಡುವ ಇದು ಚಿಕ್ಕಗಾತ್ರದ ಕೀಟಹಾರಿ ಪಕ್ಷಿ. ಮರಗಳ ಎಲೆಗಳ ನಡುವೆ ಅಡಗಿಕೊಂಡು ಕೀಟಗಳನ್ನು ಬೇಟೆಯಾಡುತ್ತದೆ. ಇವು ಹಾರಾಡುತ್ತಲೇ ಕೀಟಗಳನ್ನು ಹಿಡಿಯುವ ಸಾಮರ್ಥ್ಯ ಹೊಂದಿವೆ’ ಎನ್ನುತ್ತಾರೆ ತಜ್ಞರು.

‘ಚಿಫ್ಚಾಫ್ ಹಕ್ಕಿಗಳು ಸೈಬೀರಿಯಾ ಮತ್ತು ಉತ್ತರ ಹಾಗೂ ಮಧ್ಯ ಏಷ್ಯಾದಿಂದ ವಲಸೆ ಬರುತ್ತವೆ. ಮೂಲ ದೇಶದ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಅಕ್ಟೋಬರ್ ಅಂತ್ಯದಿಂದ ಫೆಬ್ರುವರಿ ಆರಂಭದವರೆಗೂ ಭಾರತೀಯ ಉಪಖಂಡದ ಉತ್ತರ ಬಯಲು ಪ್ರದೇಶಗಳಿಗೆ ಬರುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಸಂಗಮೇಶ ಕಡಗದ ತಿಳಿಸಿದ್ದಾರೆ.

‘ವಲಸೆ ಹಕ್ಕಿಗಳು ಒಮ್ಮೆ ಒಂದು ಸ್ಥಳಕ್ಕೆ ವಲಸೆ ಬಂದು, ಅದು ಸುರಕ್ಷಿತವೆನಿಸಿದರೆ ಪ್ರತಿ ಋತುವಿನಲ್ಲೂ ಆ ಪ್ರದೇಶ ಅಥವಾ ಸುತ್ತಮುತ್ತಲಿನ ಪ್ರದೇಶಕ್ಕೆ ಬರುತ್ತವೆ’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.