ಅಮುಲ್ ಮಾದರಿಯಲ್ಲಿ ಹತ್ತಿ ಕೃಷಿ ಮತ್ತು ಕೈಮಗ್ಗ ಅಭಿವೃದ್ದಿಯಾಗಲಿ: ಪ್ರಸನ್ನ

7

ಅಮುಲ್ ಮಾದರಿಯಲ್ಲಿ ಹತ್ತಿ ಕೃಷಿ ಮತ್ತು ಕೈಮಗ್ಗ ಅಭಿವೃದ್ದಿಯಾಗಲಿ: ಪ್ರಸನ್ನ

Published:
Updated:
Deccan Herald

ಗಜೇಂದ್ರಗಡ: ‘ಹತ್ತಿ ಕೃಷಿ ಮತ್ತು ಕೈಮಗ್ಗ ನೇಕಾರಿಕೆ ಅಭಿವೃದ್ಧಿ ಮಾಡದೆ ಉತ್ತರ ಕರ್ನಾಟಕದ ಅಭಿವೃದ್ಧಿ ಅಸಾಧ್ಯ’ ಎಂದು ಕೈಮಗ್ಗ ಪರ ಹೋರಾಟಗಾರ ಪ್ರಸನ್ನ ಹೆಗ್ಗೋಡು ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಅಭಿವೃದ್ಧಿ ಹೆಸರಿನಲ್ಲಿ ಇಲ್ಲ ಸಲ್ಲದ ಕೈಗಾರಿಕೆಗಳನ್ನು ತರುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುವುದನ್ನು ನಾವು ವಿರೋಧಿಸುತ್ತೇವೆ. ಬದಲಾಗಿ ಹತ್ತಿ ಬೆಳೆಯುವ ಈ ಭಾಗದಲ್ಲಿ ಹತ್ತಿ ಬೆಳೆಗಾರರಿಗೆ ಹಾಗೂ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಿ, ಅಮುಲ್ ಮಾದರಿಯಲ್ಲಿ ಮಾರುಕಟ್ಟೆ ಒದಗಿಸಿದರೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆ’ ಎಂದರು.

ಉತ್ತಮ ಪರಿಕಲ್ಪನೆಯಲ್ಲಿ ಪ್ರಾರಂಭವಾದ ಕೆ.ಎಚ್.ಡಿ.ಸಿ, ನಂತರ ಸರ್ಕಾರದ ನಿಯಂತ್ರಣಕ್ಕೆ ಬಂದು ಮುಚ್ಚುವ ಸ್ಥಿತಿ ತಲುಪಿದೆ. ಉತ್ಪಾದಕರಿಂದ ಹಾಲು ಸಂಗ್ರಹಿಸಿ ಅನೇಕ ಉತ್ಪನ್ನಗಳನ್ನು ತಯಾರಿಸಿ ವಿದೇಶಿ ಬ್ರ್ಯಾಂಡೆಡ್ ಕಂಪನಿಗಳ ವಿರುದ್ಧ ಅಮುಲ್‌ ಹೆಸರು ಮಾಡಿದೆ. ಇದೇ ರೀತಿ ಕೈಮಗ್ಗ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸಬೇಕಿದೆ ಎಂದರು.

ಕಾರ್ಪೋರೇಟ್ ಕಂಪನಿಗಳು ನಡೆಸುವ ಉದ್ಯಮಕ್ಕೂ ಐದು ಸಾವಿರ ವರ್ಷಗಳ ಪುರಾತನ ಕೈ ಮಗ್ಗ ಉದ್ಯಮಕ್ಕೂ ಏನು ವ್ಯತ್ಯಾಸ ಇದನ್ನು ಅಷ್ಟೇ ಗೌರವದಿಂದ ಅವರಿಗೆ ಕೊಡುವ ಸೌಲಭ್ಯಗಳನ್ನು ಕೊಡಿ ಎಂಬುದು ನಮ್ಮ ಬೇಡಿಕೆ. ಇದಕ್ಕಾಗಿ ಒಂದು ತಜ್ಞರ ಸಮಿತಿ ರಚಿಸಲಿದ್ದೇವೆ. ಸಮಿತಿಯಲ್ಲಿ ಅಧಿಕಾರಿಗಳು, ತಂತ್ರಜ್ಞರು, ಬುದ್ಧಿಜೀವಿಗಳು ಇದ್ದು, ಯೋಜನೆ ಸಿದ್ಧಪಡಿಸಲಿದ್ದಾರೆ ಎಂದರು.

ಕೈಮಗ್ಗದ ಬಟ್ಟೆಗಳಿಗೆ ವಿಶ್ವದಾದ್ಯಂತ ಬೇಡಿಕೆಗಳು ಬರುತ್ತಿವೆ. ಈ ಬೇಡಿಕೆಯನ್ನು ಕೇವಲ ಭಾರತ ಪೂರೈಸಲು ಸಾಧ್ಯ. ಬೇರೆ ದೇಶಗಳಾದ ಚೀನಾ, ಕೊರಿಯಾ, ವಿಯೆಟ್ನಾಂ ಪೂರೈಸಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಕೈಮಗ್ಗಗಳು ನಾಮಾವಶೇಷವಾಗಿವೆ. ಆದ್ದರಿಂದ ಸರ್ಕಾರಗಳು ಈ ಉದ್ಯಮಕ್ಕೆ ಉತ್ತೇಜನ ನೀಡುವುದರಿಂದ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂದರು.

ಬಿ.ಎ.ಕೆಂಚರಡ್ಡಿ, ವಿಶ್ವನಾಥ ಕೆಂಚಿ, ಎಂ.ಎನ್.ಕುಲಕರ್ಣಿ, ಶೇಖಪ್ಪ ಆಶಾಪೂರ, ಕೇಶಪ್ಪ ಬಸರಕೋಡ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !