ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 9 ಮಂದಿಗೆ ಸೋಂಕು

ಸೋಂಕಿತರ ಸಂಪರ್ಕದಿಂದ ಹೆಚ್ಚುತ್ತಿರುವ ಪ್ರಕರಣ
Last Updated 23 ಜೂನ್ 2020, 14:48 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಒಟ್ಟು 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ವರದಿಯಾದ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಪಿ-8289 ಹಾಗೂ ಪಿ-8290 ಸಂಪರ್ಕದಿಂದ ಗದಗ ತಾಲ್ಲೂಕಿನ ಹೊಂಬಳ ಗ್ರಾಮದ 32 ವರ್ಷದ ಮಹಿಳೆ (ಪಿ-9403) ಹಾಗೂ 38 ವರ್ಷದ ಮಹಿಳೆಯಲ್ಲಿ (ಪಿ-9404) ಸೋಂಕು ದೃಢಪಟ್ಟಿದೆ.

ಹರ್ತಿ ಗ್ರಾಮದ ಪಿ-7832 ಸಂಪರ್ಕದಿಂದ ಹೊಸೂರಿನ 65 ವರ್ಷದ ಮಹಿಳೆಗೆ, ಪಿ-9406 ಹಾಗೂ ಪಿ-8725 ಸಂಪರ್ಕದಿಂದ ಗದುಗಿನ 25 ವರ್ಷದ ಮಹಿಳೆಗೆ (ಪಿ-9405) ಸೋಂಕು ದೃಢಪಟ್ಟಿದೆ.

ಗದುಗಿನ ಮಲ್ಲಸಮುದ್ರದ 35 ವರ್ಷದ ಪುರುಷನಿಗೆ (ಪಿ-9402) ಸೋಂಕು ತಗುಲಿದ್ದು, ಇದರ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಹೊರ ಜಿಲ್ಲೆಯ ಪ್ರಯಾಣದ ಇತಿಹಾಸ ಹೊಂದಿರುವ ರೋಣದ 33 ವರ್ಷದ ಪುರುಷನಿಗೆ (ಪಿ-9410) ಸೋಂಕು ಕಾಣಿಸಿಕೊಂಡಿದೆ.

ಅಂತರ್ ಜಿಲ್ಲಾ ಪ್ರಯಾಣದಿಂದಾಗಿ ಇಟಗಿ ಗ್ರಾಮದ 38 ವರ್ಷದ ಪುರುಷನಿಗೆ (ಪಿ-9407) ಸೋಂಕು ದೃಡಪಟ್ಟಿದ್ದು, ಇವರ ಸಂಪರ್ಕದಿಂದ 28 ವರ್ಷದ ಪುರುಷ (ಪಿ-9409) ಹಾಗೂ 32 ವರ್ಷದ ಮಹಿಳೆಯಲ್ಲಿ (ಪಿ-9408) ಸೋಂಕು ದೃಢಪಟ್ಟಿದೆ.

‘ಸೋಂಕಿತರನ್ನು ಜಿಲ್ಲಾ ಕೇಂದ್ರದ ನಿಗದಿತ ಕೊವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 42 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, 44 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT