ಮಂಗಳವಾರ, ಜನವರಿ 26, 2021
15 °C

ಕಿರಿಯರ ಕ್ರಿಕೆಟ್‌ ಟೂರ್ನಿ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರದ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆ ಆಯೋಜಿಸಿದ್ದ ಅಂತರ ಜಿಲ್ಲಾ ಕಿರಿಯರ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮುಕ್ತಾಯಗೊಂಡಿದೆ.

ಈ ಪಂದ್ಯಾವಳಿಯಲ್ಲಿ ಗದಗ, ಹೊಸಪೇಟೆ, ವಿಜಯಪುರ, ಬಳ್ಳಾರಿ, ಧಾರವಾಡ ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು.

ಅಂತಿಮ ಹಣಾಹಣಿಯಲ್ಲಿ ಜಾನೊಪಂತರ ಕ್ರಿಕೆಟ್ ಅಕಾಡೆಮಿ ಹಾಗೂ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ತಂಡಗಳು ಸೆಣಸಾಡಿದವು. ಫೈನಲ್ಸ್‌ನಲ್ಲಿ ಜಾನೋಪಂತರ ಕ್ರಿಕೆಟ್ ಅಕಾಡೆಮಿ ವಿಜಯಶಾಲಿಯಾಯಿತು.

ಈ ಟೂರ್ನಿಯನ್ನು ಡಾ. ಎಸ್.ಎಲ್.ಗುಳೆದಗುಡ್ಡ (ಮುನ್ನಾ) ಮಾರ್ಗದರ್ಶನದಲ್ಲಿ ಶಿವರಾಜ್ ಕರಡಿ, ಲಾಲಸಾಬ ಗುಳೇದಗುಡ್ಡ, ಸಚಿನ್ ಪಾಟೀಲ್, ಕಿರಣ್ ಆಸಂಗಿ, ಸಮೀರ್ ಗುಳೇದಗುಡ್ಡ, ಕಾರ್ತಿಕ್ ಬಾಗಲಕೋಟ, ಸಚಿನ್ ಜೋಗಿನ್, ದೇವೇಶ್ ಜೈನ್, ಸದಾಶಿವ, ನಿಖಿಲ್, ಕಾರ್ತಿಕ್ ಎಚ್, ರಾಮು, ಸಂತೋಷ್, ರಾಕೇಶ್, ಸಂದೇಶ ಆಯೋಜಿಸಿದ್ದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ತಂಡದ ಆಯೋಜಕರಾದ ಡಾ. ಎಸ್.ಎಲ್.ಗುಳೆದಗುಡ್ಡ, ‘1996ರಲ್ಲಿ ಸ್ಥಾಪನೆಯಾದ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆಯು ಜಿಲ್ಲೆ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಒದಗಿಸುತ್ತಾ ಬಂದಿದೆ. ಅಲ್ಲದೇ ಗ್ರಾಮೀಣ ಪ್ರತಿಭೆಗಳಿಗೆ ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ತರಬೇತಿ ನೀಡುತ್ತಾ ಬಂದಿದೆ’ ಎಂದು ಹೇಳಿದರು.

‘2021 ಜನವರಿ 26 ಜನವರಿರಂದು ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆಯು ಬೆಳ್ಳಿಹಬ್ಬ ಆಚರಿಸಿಕೊಳ್ಳಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.