ಗದಗ: ತಾಲ್ಲೂಕಿನ ಹುಲಕೋಟಿ, ದುಂದೂರು, ಶ್ಯಾಗೋಟಿ, ಚಿಕ್ಕಹಂದಿಗೋಳ, ಬಳಗಾನೂರು ಭಾಗದಲ್ಲಿ ಶುಕ್ರವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆಯಾಯಿತು.
ಈ ಭಾಗದಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಹೊಲಗಳಲ್ಲಿ ನೀರು ನಿಂತಿದ್ದು ಕಟಾವಿಗೆ ಬಂದಿದ್ದ ಹೆಸರು ಬೆಳೆಗೆ ಹಾನಿಯಾಗಿದೆ.
‘ತೇವಾಂಶ ಹೆಚ್ಚಾದ ಕಾರಣ ಹೆಸರು ಕಟಾವಿಗೆಂದು ಕರೆಯಿಸಿದ್ದ ಕೊಯ್ಲು ಯಂತ್ರಗಳು ಸಹ ಹೊಲದಲ್ಲೇ ಸಿಲುಕಿವೆ. ಯಂತ್ರಗಳು ಕೊಯ್ಲು ಮಾಡದಿದ್ದರೂ ಬಾಡಿಗೆ ಭರಿಸಬೇಕಾದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ’ ಎಂದು ದುಂದೂರು ಗ್ರಾಮದ ರೈತ ಶ್ರೀನಿವಾಸ ಬಂಡಿ ಅಲವತ್ತುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.