ಮುಂಡರಗಿ: ತಾಲ್ಲೂಕಿನ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಈವರೆಗೂ ಸಂಬಂಧಪಟ್ಟವರು ಯಾವುದೇ ಸೂಕ್ತ ಕ್ರಮವಹಿಸದಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ತಕ್ಷಣ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಂಬಳ ಗ್ರಾಮದ ಸರ್ವೋದಯ ಶೈಕ್ಷಣಿಕ ಸಂಸ್ಥೆಯ ಕಾರ್ಯದರ್ಶಿ ಗುಡದಪ್ಪ ತಳಗೇರಿ ಒತ್ತಾಯಿಸಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯು ಶನಿವಾರ ತಾತ್ಕಾಲಿಕವಾಗಿ ನೀಡಿರುವ ಆಂಬುಲೆನ್ಸ್ ವಾಹನಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಪ್ರತಿಭಟನೆ ನಡೆಸಿ 15 ದಿನ ಕಳೆದರೂ ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೃತ ಸಂತೋಷ ಹರಿಜನ ಕುಟುಂಬಕ್ಕೆ ಸಾಂತ್ವನ ಹೇಳಲು ಯಾವ ಜನಪ್ರತಿನಿಧಿಯೂ ಬಾರದಿರುವುದು ದುರ್ದೈವದ ಸಂಗತಿ’ ಎಂದರು.

ಪತ್ರಕರ್ತ ಲಕ್ಷ್ಮಣ ದೊಡ್ಡಮನಿ ಮಾತನಾಡಿ, ‘ನಮ್ಮ ಬೇಡಿಕೆಗಳು ಈಡೇರದಿದ್ದರೆ ಜೂನ್ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಕೈಗೊಂಡು, ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಕುಮಾರ ಗೌಡಣ್ಣವರ, ಮಂಜುನಾಥ ಸಿದ್ದಣ್ಣವರ, ಗವಿಸಿದ್ದಪ್ಪ ಹಳ್ಳಾಕರ, ಮರಿಯಜ್ಜ ಎಂ., ಅಬ್ದುಲ್ ಕಂಪ್ಲಿಮನಿ, ಈರಣ್ಣ ಕರವೀರಮಠ, ಭಕ್ಷಿಸಾಬ್ ತಾಂಬೋಟಿ, ವಿನಾಯಕ ಕಟ್ಟೆಣ್ಣವರ, ಮಹಾಂತೇಶ ಬಂಡಿ, ಸೋಮಪ್ಪ ತಳಗೇರಿ, ನವೀನ ಚಲವಾದಿ, ವೈದ್ಯಾಧಿಕಾರಿ ಡಾ.ಶಂಕರ ಭಾವಿಮನಿ, ಪ್ರವೀಣ ಭೋವಿ, ಹನಮಂತಪ್ಪ ಕದಡಿ, ಪ್ರದೀಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-2091153998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.